ಇರೋಮ್ ಶರ್ಮಿಳಾಗೆ ಹೀನಾಯ ಸೋಲು

Spread the love

Irom--01

ಇಂಫಾಲ್. ಮಾ.11 : 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಇತ್ತೀಚೆಗಷ್ಟೇ ರಾಜಕೀಯಕ್ಕೆ ಧುಮಿಕಿದ್ದ ಉಕ್ಕಿನ ಮಹಿಳೆ ಇರೋಮ್ ಶರ್ಮಿಳಾಗೆ ಆರಂಭದಲ್ಲೇ ಭಾರಿ ಮುಖಭಂಗವಾಗಿದೆ. ಪ್ರಜಾ ಎಂಬ ಹೊಸ ಪಕ್ಷ ಸ್ಥಾಪಿಸಿದ್ದ ಶರ್ಮಿಳಾ ಹಾಲಿ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿದ್ದಾರೆ.  ಆಶ್ಚರ್ಯದ ಸಂಗತಿಯೇನೆದರೆ ಶರ್ಮಿಳಾ ಸಂಪಾದಿಸಿದ್ದು ಕೇವಲ 100 ಕ್ಕೂ ಕಡಿಮೆ ಮತಗಳ ಮಾತ್ರ. ಹಾಲಿ ಸಿಎಂ ಓಕ್ರಾಮ್ ಇಬೋಬಿ ಸಿಂಗ್ 15,000 ಕ್ಕೂ ಹೆಚ್ಚು ಅಂತರದಿಂದ ದಿಗ್ವಿಜಯ ಸಾಧಿಸಿದ್ದಾರೆ.

ಮಣಿಪುರದಿಂದ ಶಸ್ತ್ರಾಸ್ತ್ರ ಪಡೆಗಳ ವಿಶೇಷ ಅಧಿಕಾರ ನೀತಿ 1958 ನ್ನು ಹಿಂಪಡೆಯಬೇಕು ಎಂದು 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದ 44 ವರ್ಷದ ಶರ್ಮಿಳಾ ಕಳೆದ ವರ್ಷ ಆಗಸ್ಟ್ ನಲ್ಲಿ ಉಪವಾಸ ಹಿಂಪಡೆದಿದ್ದರು. ಈ ಸೋಲು ಇದು ಉಕ್ಕಿನ ಮಹಿಳೆ ಎಂದು ಕರೆಸಿಕೊಂಡ ಮಹಿಳೆಗೆ ತೀವ್ರ ನಿರಾಶೆಯಾಗಿದೆ. ಆದರೂ ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ಎಂಬ ಆಶಾದಾಯಕ ಮಾತು ಹೇಳಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಪ್ರಬಲ ಪೈಪೋಟಿಯಿದ್ದು, ಇತರರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin