ಇಲಾಖೆ ನೀಡುವ ಆರೋಗ್ಯ ಸಲಹೆ ಕಡ್ಡಾಯವಾಗಿ ಪಾಲಿಸಿ
ಬೇಲೂರು, ಆ.24- ಡೇಂಘಿ ಸೇರಿದಂತೆ ವಿವಿಧ ರೋಗಗಳಿಂದ ದೂರವಿರಲು ಸಾರ್ವಜನಿಕರು ಇಲಾಖೆ ನೀಡುವ ಆರೋಗ್ಯ ಸಲಹೆ ಪಾಲಿಸುವಂತೆ ತಾಲ್ಲೂಕು ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕ ಕೃಷ್ಣಪ್ಪ ಕರೆ ನೀಡಿದರು. ತಾಲೂಕು ಆರೋಗ್ಯ ಇಲಾಖೆಯ ಆರೋಗ್ಯ ಪಟ್ಟಣದ ವಿವಿಧ ಬಡಾವಣೆಗಳಲ್ಲಿ 2 ನೇ ಸುತ್ತಿನ ಲಾರ್ವ ಸಮೀಕ್ಷೇಯನ್ನು ಕೈಗೊಂಡು ಡೇಂಗ್ಯೂಜ್ವರ, ಮಲೇರಿಯ ಹಾಗೂ ಚಿಕುನ್ಗೂನ್ಯ ರೋಗಗಳ ನಿಯಂತ್ರಣಕ್ಕಾಗಿ ಸುಮಾರು 15 ತಂಡಗಳೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ ಮೇಲೆ ಮಾತನಾಡಿದರು.
ಪಟ್ಟಣದ ವಿವಿದ ಭಾಗಗಳಲ್ಲಿ 2 ಸುತ್ತಿನ ಲಾರ್ವ ಸಮೀಕ್ಷೆ ಕೈಗೊಂಡು ಮಾತನಾಡಿದ ತಾಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ಕೃಷ್ಣಪ್ಪ, ಡೇಂಘಿ ಹಾಗೂ ಚಿಕೂನ್ ಗೂನ್ಯದಂತಹ ರೋಗಗಳನ್ನು ಹರಡುವ ಸೊಳ್ಳೆ ಹಗಲು ಸಮಯದಲ್ಲಿ ಕಚ್ಚುವುದು. ಇವುಗಳು ಸಾಮಾನ್ಯವಾಗಿ ಮನೆಗಳ ಹಾಗೂ ಸುತ್ತಮುತ್ತಲಿನ ಪ್ರದೇಶದ ಶುದ್ದವಾದ ನಿಂತ ನೀರಿನಲ್ಲಿ ಸಂತಾನಭಿವೃದ್ದಿಯನ್ನು ಮಾಡಿ, ಈ ಸೊಳ್ಳೆಗಳು ಜನರಿಗೆ ಕಚ್ಚಿದ ಸಂದರ್ಭದಲ್ಲಿ ಈ ರೋಗಗಳಿಗೆ ತುತ್ತಾಗುತ್ತಾರೆ ಎಂದರು.
ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದ ಅವರು ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವಾದ ಕಾರಣ ಈ ರೋಗಗಳು ಬಾರದಂತೆ ಸೋಳ್ಳೆಗಳಿಂದ ಕಚ್ಚಿಸಿ ಕೊಳ್ಳುವುದನ್ನು ತಪ್ಪಿಸಿಕೊಂಡು ರೋಗ ಮುಕ್ತರಾಗಬೇಕು. ಡೆಂಗ್ಯೂಜ್ವರ ಬಂದ ಸಂದರ್ಭದಲ್ಲಿ ಸ್ವಯಂ ಚಿಕಿತ್ಸೆಗೆ ಮುಂದಾಗದೆ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು ಮುಂದಾಗುವ ಮಾರಣಾಂತಿಕ ಅಪಾಯ ತಪ್ಪಿಸಿ ಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ಹಿರಿಯ ಆರೋಗ್ಯ ಇಲಾಖೆಯ ಸಹಾಯಕ ಜಯರಾಮ್, ನಿಂಗೇಗೌಡ, ಧರಣೇಶ್, ಶಿವನಾಯಕ್ ಇನ್ನಿತರರಿದ್ದರು.