ಇಸ್ಕಾನ್ ಸಂಸ್ಥೆ ನೀಡುವ ಬಿಸಿಯೂಟದಲ್ಲಿ ಸತ್ತ ಹಾವಿನ ಮರಿ ಪತ್ತೆ ..!
ನವದೆಹಲಿ, ಮೇ 12- ಸರ್ಕಾರಗಳಿಂದ ನೀಡುತ್ತಿರುವ ಬಿಸಿಯೂಟದಲ್ಲಿ ಇದುವರೆಗೂ ಸಣ್ಣ ಸಣ್ಣ ಹುಳುಗಳು, ಜಿರಲೆ, ಇಲಿಗಳು ಸಿಗುತ್ತಿದ್ದ ವಿಷಯಗಳು ಈಗಾಗಲೇ ಕೇಳಿದ್ದೀರಿ, ಓದಿದ್ದೀರಿ ಆದರೆ ಸತ್ತ ಹಾವು ಇರುವುದನ್ನು ನೋಡಿದ್ದೀರಾ…! ನವದೆಹಲಿಯ ಫರೀದಾಬಾದ್ನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿದ್ದ ಬಿಸಿಯೂಟದಲ್ಲಿ ಸತ್ತ ಹಾವಿನ ಮರಿಯೊಂದು ಬಿದ್ದಿರುವುದನ್ನು ಅರಿಯದೆ ಕೆಲ ಮಕ್ಕಳಿಗೆ ಊಟ ಬಡಿಸಿರುವ ಘಟನೆ ವರದಿಯಾಗಿದೆ.
ರಾಜಕೀಯ ಬಾಲಕಿಯರ ಪ್ರೌಢಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಬಡಿಸಿದ ಕಿಚಡಿಯಲ್ಲಿ ಹಾವಿನ ಮರಿ ಕಾಣಿಸಿಕೊಂಡಿದ್ದು ಕಿಚಡಿ ತಿಂದ ನಂತರ ಕೆಲವು ಬಾಲಕಿಯರು ವಾಂತಿ ಮಾಡಿಕೊಂಡಿದ್ದಾರೆ.
ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಬಜ್ರಾ ಬಾಲಾ ಅವರು ಊಟ ಸರಬರಾಜು ಮಾಡಿದ ಇಸ್ಕಾನ್ ಸಂಸ್ಥೆಗೆ ವರದಿ ಕಳಿಸಿದ್ದಾರೆ. ರಾಜಕೀಯ ಶಾಲೆ ಅಲ್ಲದೆ ಇತರ ಶಾಲೆಗಳಿಗೂ ಇದೇ ಊಟವನ್ನು ಸರಬರಾಜು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಕಾನ್ನ ಆಡಳಿತ ಮಂಡಳಿಯು ನಾವು ಆಹಾರವನ್ನು ಶುಚಿ ಹಾಗೂ ಗುಣಮಟ್ಟದಿಂದಲೇ ತಯಾರು ಮಾಡುತ್ತೇವೆ, ಊಟವನ್ನು ಶಾಲೆಗಳಿಗೆ ರವಾನಿಸುವ ಮುನ್ನವು ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗುತ್ತದೆ. ಆದರೂ ಈ ರೀತಿಯ ಅವಘಡಗಳು ನಡೆಯುತ್ತಿರುವುದಕ್ಕೆ ಶಾಲೆಗಳಲ್ಲಿ ಆಹಾರವನ್ನು ಹೊರವಲಯದಲ್ಲಿ ಯಾವುದೇ ಮುಂಜಾಗ್ರತೆಯನ್ನು ಅನುಸರಿಸದಿರುವುದೇ ಕಾರಣ ಎಂದು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >