ಇಸ್ರೋ ಮತ್ತೊಂದು ಮೈಲುಗಲ್ಲು : ಏಕಕಾಲಕ್ಕೆ 8 ಉಪಗ್ರಹಗಳ ಉಡಾವಣೆ ಯಶಸ್ವಿ

Isro-1

ಶ್ರೀಹರಿಕೋಟಾ, ಸೆ.26-ಭಾರತದ ಸಾಗರದ ಮೇಲೆ ನಿರಂತರ ಕಣ್ಗಾವಲು ಇರಿಸುವ ಮತ್ತು ಹವಾಮಾನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿ ನೀಡುವ ಸ್ಕ್ಯಾಟ್‍ಸ್ಯಾಟ್-1 ಸೇರಿದಂತೆ ಒಟ್ಟು 8 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಿಗ್ಗೆ ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಮತ್ತೊಂದು ಐತಿಹಾಸಿಕ ಸಾಧನೆಯಾಗಿದ್ದು, ಇಡೀ ವಿಶ್ವವೇ ಭಾರತದ ಸಾಧನೆಗೆ ಬೆರಗಾಗಿದೆ.  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ 9.12ರಲ್ಲಿ ಪಿಎಸ್‍ಎಲ್‍ವಿ-35 ರಾಕೆಟ್ ಎಂಟು ಉಪಗ್ರಹವನ್ನು ಹೊತ್ತು ಇಂದು ನಭಕ್ಕೆ ಚಿಮ್ಮಿತು.

ಅಲ್ಜಿರಿಯಾ ಮೂರು (ಅಲ್‍ಸ್ಯಾಟ್-1ಬಿ, ಅಲ್‍ಸ್ಯಾಟ್-2ಬಿ ಮತ್ತು ಅಲ್‍ಸ್ಯಾಟ್-1ಎನ್) ಹಾಗೂ ಅಮೆರಿಕ (ಪಾತ್‍ಫೈಂಡರ್-1) ಮತ್ತು ಕೆನಡಾದ (ಎನ್‍ಎಲ್‍ಎಸ್-1) ತಲಾ ಒಂದೊಂದು ಉಪಗ್ರಹಗಳೊಂದಿಗೆ ಒಟ್ಟು ಎಂಟು ಸ್ಯಾಟಲೈಟ್‍ಗಳನ್ನು ಹೊತ್ತು 44.4 ಮೀಟರ್ ಎತ್ತರದ ಇಸ್ರೋ ವರ್ಕ್‍ಹಾರ್ಸ್ ಪಿಎಸ್‍ಎಲ್‍ವಿ ರಾಕೆಟ್ ಯಶಸ್ವಿಯಾಗಿ ಉಡ್ಡಯನ ಮಾಡಿರುವುದು ಒಂದು ಚಾರಿತ್ರಿಕ ಸಾಧನೆಯಾಗಿದೆ. ಇದೇ ಮೊದಲ ಬಾರಿಗೆ ಪಿಎಸ್‍ಎಲ್‍ವಿ ತನ್ನ ಉಪಗ್ರಹಗಳನ್ನು ಎರಡು ವಿಭಿನ್ನ ಕಕ್ಷೆಗಳಿಗೆ ಸೇರಿಸಲಿದೆ.  ಸ್ಕ್ಯಾಟ್‍ಸ್ಯಾಟ್-1 ಉಪಗ್ರಹವು ಓಷನ್‍ಸ್ಯಾಟ್-2ರ ಸರಣಿ ಯೋಜನೆಯ ಮುಂದುವರಿದ ಹಾಗೂ ಸುಧಾರಿತ ಉಪಗ್ರಹವಾಗಿದೆ. ಇದು ಕ್ಯೂಬ್ಯಾಂಡ್ ಸ್ಕ್ಯಾಟೋಮೀಟರನ್ನು ಸಹ ಹೊತ್ತೊಯ್ಯುವಲ್ಲಿ ಸಫಲವಾಗಿದೆ.

https://www.youtube.com/watch?v=atPC4oLHJzU

ಅಮೆರಿಕ, ಕೆನಡಾ ಮತ್ತು ಅಲ್ಜಿರಿಯಾ ದೇಶದ ಹಾಗೂ ಭಾರತೀಯ ಶೈಕ್ಷಣಿಕ ಸಂಸ್ಥೆ ಮತ್ತು 250 ವಿದ್ಯಾರ್ಥಿಗಳು ನಿರ್ಮಿಸಿರುವ ಪಿಸ್ಯಾಟ್ ಉಪಗ್ರಹ ಸೇರಿದಂತೆ ಶೈಕ್ಷಣಿಕ ಸಂಸ್ಥೆಯ ಎರಡು ಸೇರಿದಂತೆ ಒಟ್ಟು ಎಂಟು ಉಪಗ್ರಹಗಳು ಉಡಾವಣೆಯಾಗಿವೆ. ಉಪಗ್ರಹಗಳು 730 ಕಿ.ಮೀ. ದೂರದಲ್ಲಿರುವ ಸೂರ್ಯ ಸ್ಥಾಯಿ ಕಕ್ಷೆಗೆ (ಸನ್ ಸಿಂಕ್ರೋನಸ್ ಅರ್ಬಿಟ್) ಸೇರಿವೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಮತ್ತು ವಿದೇಶಿ ಉಪಗ್ರಹಗಳನ್ನು 689 ಕಿ.ಮೀ.ದೂರದಲ್ಲಿರುವ ಧೃವೀಯ ಕಕ್ಷೆ ಸೇರಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಉಪಗ್ರಹಗಳನ್ನು ಒಯ್ಯುವ ಪಿಎಸ್‍ಎಲ್‍ವಿ ಅವುಗಳನ್ನು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸುತ್ತಿರುವುದು ಇದೇ ಪ್ರಪ್ರಥಮ ಎಂಬುದು ಇಸ್ರೋದ ಮತ್ತೊಂದು ಹೆಗ್ಗಳಿಕೆಯಾಗಿದೆ.  ಸ್ಕ್ಯಾಟ್‍ಸ್ಯಾಟ್-1 ಉಪಗ್ರಹವು ಭಾರತದ ಸಾಗರಗಳ ಮೇಲೆ ನಿರಂತರ ಕಣ್ಗಾವಲು ಇಡುವುದಲ್ಲದೇ, ಹವಾಮಾನ ಅಧ್ಯಯನ, ಚಂಡಮಾರುತವೂ ಸೇರಿದಂತೆ ವಿವಿಧ ಮಾರುತಗಳು ಮತ್ತು ವಾತಾವರಣದಲ್ಲಿನ ವೈಪರಿತ್ಯಗಳ ಬಗ್ಗೆ ನಿಖರ ಮಾಹಿತಿಯನ್ನು ರವಾನಿಸಲಿದೆ. ಅಲ್ಲದೇ ಭೂಮಿಯ ಚಿತ್ರಗಳನ್ನು ತೆಗೆಯಲಿದೆ.

ಬೆಂಗಳೂರು ವರದಿ :
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ ಉಡ್ಡಯನವಾದ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆ ಸೇರಿದ್ದು, ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ನಿರ್ದೇಶಕ ದೇವಿಪ್ರಸಾದ್ ಕಾರ್ನಿಕ್ ತಿಳಿಸಿದ್ದಾರೆ. ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಈ ಉಪಗ್ರಹಗಳ ಕಾರ್ಯನಿರ್ವಹಣೆಯ ಉಸ್ತುವಾರಿ ವಹಿಸಲಿದ್ದು, ಅಗ್ಗಿಂದಾಗ್ಗೆ ಉಪಗ್ರಹ ಛಾಯಾಚಿತ್ರಗಳು ಮತ್ತು ಇತರ ಮಾಹಿತಿಗಳನ್ನು ಪಡೆಯಲಿದೆ.

 

ಪ್ರಧಾನಿ ಮೋದಿ ಅಭಿನಂದನೆ :

Isro-4

Isro-3

Isro-5

Isro-2

Sri Raghav

Admin