ಈಜಲು ತೆರಳಿದ್ದ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ
ಕೊಡಗು, ಅ.7- ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಚಿಲವಾರ ಜಲಪಾತದಲ್ಲಿ ನಿನ್ನೆ ಈಜಲೆಂದು ಹೋದ ಇಬ್ಬರು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ. ಗೋಣಿಕೊಪ್ಪದ ಸಾಯಿಶಂಕರ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಾದ ಸೋಮಣ್ಣ (19), ಸೋಮಣ್ಣ(18) ಕಾಣೆಯಾದವರು. ವಿದ್ಯಾರ್ಥಿಗಳಿಗಾಗಿ ಜಲಪಾತದಲ್ಲಿ ತೀವ್ರ ಶೋಧ ನಡೆಯುತ್ತದೆ. ಜಲಪಾತದ ಬಳಿ ವಿದ್ಯಾರ್ಥಿಗಳ ಬೈಕ್ ಮತ್ತು ಬಟ್ಟೆ ಪತ್ತೆಯಾಗಿದೆ.