ಈಜಲು ಹೋದ ಯುವಕ ನೀರು ಪಾಲು

Spread the love

Death-of-boy-in-water

ಮಂಡ್ಯ, ಆ.16- ಹೊಗೇನಕಲ್ ಜಲಪಾತದ ಬಳಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಈಜುವ ಸಾಹಸಕ್ಕೆ ಮುಂದಾದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಮಲೈಮಹದೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ನಿವಾಸಿ ರವಿಚಂದ್ರ(28) ಮೃತಪಟ್ಟ ಯುವಕ.
ಮೂರು ಬೈಕ್‍ಗಳಲ್ಲಿ 6ಮಂದಿ ಯುವಕರು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು, ದೇವರ ದರ್ಶನ ಮುಗಿಸಿಕೊಂಡು ನಂತರ ಹೊಗೇನಕಲ್ ಜಲಪಾತದ ಬಳಿ ಹೋಗಿದ್ದಾರೆ. ಎಲ್ಲರೂ ತೆಪ್ಪದಲ್ಲಿ ಹೋಗಲು ನಿರ್ಧರಿಸಿದರೆ, ರವಿಚಂದ್ರ ತಾನು ಈಜಿಕೊಂಡು ಬರುತ್ತೇನೆಂದು ಹೇಳಿ ಈಜಲು ಮುಂದಾಗಿದ್ದಾನೆ. ಈ ವೇಳೆ ನೀರು ರಭಸವಾಗಿ ಹರಿಯುತ್ತಿದ್ದುದ್ದರಿಂದ ನೀರಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.ಈ ಸಂಬಂಧ ಮಲೈಮಹದೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Sri Raghav

Admin