ಈಜಿಪುರ ಕಟ್ಟಡ ಕುಸಿತಕ್ಕೆ ಕಾರಣ ತನಿಖೆಯ ನಂತರ ತಿಳಿಯಲಿದೆ : ರಾಮಲಿಂಗಾರೆಡ್ಡಿ

Spread the love

Building-Collapse-Ijipura-0

ಬೆಂಗಳೂರು,ಅ.16- ಈಜಿಪುರದಲ್ಲಿ ನಡೆದಿರುವ ಘಟನೆ ಸಿಲಿಂಡರ್ ಬ್ಲಾಸ್ಟ್ ನಿಂದ ಸಂಭವಿಸಿರಲು ಸಾಧ್ಯವಿಲ್ಲ. ಬಹುಷಃ ಕಟ್ಟಡ ಹಳೆದಾಗಿರುವುದರಿಂದ ಕುಸಿದಿರಬಹುದು. ತನಿಖೆಯ ನಂತರ ಕಾರಣ ತಿಳಿದುಬರಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈಜಿಪುರ ಕಟ್ಟಡ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಈ ಸಂಜೆಯೊಂದಿಗೆ ಮಾತನಾಡಿದ ಅವರು, ಎರಡಂತಸ್ತಿನ ಕಟ್ಟಡ ಕುಸಿದಿದೆ. ಈ ಘಟನೆ ಸಿಲಿಂಡರ್ ಬ್ಲಾಸ್ಟ್‍ನಿಂದ ಸಂಭವಿಸಿದೆ ಎಂದು ಕೆಲವರು ಹೇಳುತ್ತಾರೆ. ಬಾಡಿಗೆದಾರರು ಹಳೆಯ ಕಟ್ಟಡವಾಗಿರುವುದರಿಂದ ಕುಸಿದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆಯ ನಂತರ ನಿಖರ ಕಾರಣ ತಿಳಿದುಬರಲಿದೆ. ನಮ್ಮ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಗ್ಯಾಸ್ ಸಿಲಿಂಡರ್ ಬ್ಲಾಸ್ಟ್‍ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇಲ್ಲ. ಸ್ಫೋಟ ಸಂಭವಿಸಿದ್ದರೆ ಬೆಂಕಿ, ಹೊಗೆ ಎಲ್ಲ ಇರಬೇಕಾಗಿತ್ತು. ಏನಾಗಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಈ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಮಗುವೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ನಮ್ಮ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Facebook Comments

Sri Raghav

Admin