ಈಜಿಪ್ಟ್ ನಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರ ಬಂಧನ

Spread the love

Egypt--01

ಕೈರೋ, ಫೆ.8- ಈಜಿಪ್ಟ್ ನಲ್ಲಿ 2013ರಲ್ಲಿ ನಡೆದ ಸೇನಾ ಕ್ರಾಂತಿ ಮತ್ತು ನಂತರದ ಬುಡಮೇಲು ಕೃತ್ಯದ ಬಳಿಕ 100ಕ್ಕೂ ಹೆಚ್ಚು ಪತ್ರಕರ್ತರನ್ನು ಬಂಧಿಸಲಾಗಿದೆ. ವಿವಿಧ ಕಾನೂನು ಉಲ್ಲಂಘನೆಗಳ ಆರೋಪದ ಮೇಲೆ ಪತ್ರಕರ್ತರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಬ್ ಮೀಡಿಯಾ ಫ್ರೀಡಂ ಮಾನಿಟರ್ ಸಂಸ್ಥೆ ತಿಳಿಸಿದೆ.   ಬಂಧಿಸಲ್ಟಟ್ಟ ಪತ್ರಕರ್ತರಲ್ಲಿ 30 ಮಂದಿ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ಅವರ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಳೆದ ತಿಂಗಳು ಈಜಿಪ್ಟ್ ನಲ್ಲಿ 112 ಪತ್ರಕರ್ತರ ಮೇಲೆ ಕೊಲೆ ಯತ್ನದ ಘಟನೆಗಳು ನಡೆದಿವೆ. ಈ ಅವಧಿಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin