ಈವಾರ ರಾಜದ್ಯಂತ ‘ಲೈಫ್ ಸೂಪರ್’ ಬಿಡುಗಡೆ

life

ಮನುಷ್ಯನ ಲೈಫು ಸೂಪರ್ ಆಗೋದು ಆತ ಅಂದ್ಕೊಂಡಂಗೆ ಆದ್ರೆ ಅಲ್ಲ. ಆತ ಅಂದ್ಕೊಂಡಂಗ ಮಾಡಿದ್ರೆ. ಇಂಥದ್ದೊಂದು ಸಂದೇಶವನ್ನಿಟ್ಟುಕೊಂಡು ಹೊಸ ಯುವಕರ ಪಡೆಯೊಂದು ನಿರ್ಮಿಸಿರುವ ಚಿತ್ರವೇ ಲೈಫು ಸೂಪರ್.   ವಿನೋದ್ ಕುಮಾರ್ ಆರ್. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಈವಾರ ರಾಜದ್ಯಂತ ಬಿಡುಗಡೆಯಾಗುತ್ತಿದೆ. ಒಟ್ಟು 5ಹಾಡುಗಳು ಈ ಚಿತ್ರದಲ್ಲಿವೆ. ಉದ್ಯಮಿ ಬಳ್ಳಾರಿ ಮೂಲದ ಲ್ಯಾಂಡ್ ಡೆವಲಪರ್ಸ್್ ವಿ.ಸಿ.ತಿಮ್ಮಾರೆಡ್ಡಿ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಗಾಂಧಿ ನಗರ್ಕ ಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ಹುಡುಗರು ಜೀವನದಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಹುಡುಗರಲ್ಲಿರುವ ಆತ್ಮವಿಶ್ವಾಸ, ಕೆಲಸದ ಮೇಲಿರುವ ಶ್ರದ್ದೆಯನ್ನು ಕಂಡು ಇವರು ಏನೋ ಒಂದು ಸಾಧಿಸುತ್ತಾರೆಂಬ ನಂಬಿಕೆಯಿಂದ ತಿಮ್ಮರೆಡ್ಡಿ ಅವರು ಬಂಡವಾಳ ಹಾಕಿದ್ದಾರೆ.

ತನ್ನ ಮೊದಲ ಚಿತ್ರದ  ಬಗ್ಗೆ ಮಾತನಾಡಿದ ನಿರ್ದೇಶಕ ವಿನೋದ್ ಕುಮಾರ್ ಎಡಿಟರ್ ಆಗಿ 7-8ವರ್ಷ ಕೆಲಸ ಮಾಡಿದ್ದೇನೆ. ಅಲ್ಲದೆ ಆಡ್ ಕಂಪನಿಯಲ್ಲೂ ವರ್ಕ್ ಮಾಡಿದೆ. ಲಿಖಿತ್ ಸೂರ್ಯ ಒಂದು ಆರ್ಟಿಕಲ್ ತೋರಿಸಿದ. ಇದನ್ನು ಚಲನ ಚಿತ್ರ ಮಾಡಿದರೆ ಚೆನ್ನಾಗಿರುತ್ತದೆ ಅಂತ ನಿರ್ಧರಿಸಿ ಸ್ಕ್ರಿಪ್ಟ್ ಮಾಡಿದೆವು. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ಲೈಫು ಸೂಪರ್ ಆಗಬೇಕು ಅಂದುಕೊಂಡ ಇಬ್ಬರು ಹುಡುಗರ ಕಥೆಯಿದು. ಅವರು ಸೂಪರ್ ಆಗ್ತಾರೋ ಇಲ್ಲವೋ ಎನ್ನುವುದೇ ಈ ಚಿತ್ರದ ಕ್ಲೈಮ್ಯಾಕ್ಸ್. ಇಬ್ಬರೂ ಸೇರಿ ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಿಾರುವಾಗ 50 ಕೋಟಿ ರೂ. ಕಪ್ಪುಹಣವನ್ನು ಲಪmಯಿಸಲು ಏನೆಲ್ಲಾ ತಂತ್ರ-ಕುತಂತ್ರಗಳನ್ನು ಉಪಯೋಗಿಸುತ್ತಾರೆ. ಕೊನೆಗೆ ತಾವಂದುಕೊಂಡದ್ದನ್ನು ಸಾಧಿಸಿದರೋ, ಇಲ್ಲವೋ ಎಂಬುದನ್ನು ಲೈಫು ಸೂಪರ್ ಚಿತ್ರ ಹೇಳುತ್ತದೆ. ಲಿಖಿತ್ ಸೂರ್ಯ ಹಾಗೂ ನಿರಂತ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಅಪ್ಪಯ್ಯ, ಅನುಪೂವಮ್ಮ ಚಿತ್ರದ ನಾಯಕಿಯರು.
ಬಳ್ಳಾರಿ, ದಾವಣಗೆರೆ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 60ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಜಯ ಕುಮಾರ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಾಯಕ ನಟ ಲಿಖಿತ್ ಸೂರ್ಯ ಮಾತನಾಡಿ, 2013ರ ಚುನಾವಣೆ ಸಂದರ್ಭದಲ್ಲಿ ಹೊಳೆದಂಥ ಕಥೆಯಿದು. ಚುನಾವಣೆಯ ಟೈಂನಲ್ಲಿ ಹಣದ ವರ್ಗಾವಣೆಯಾಗುವುದು ಕಾಮನ್. ಅದೇ ರೀತಿ ಹಣದ ಸಾಗಾಣಿಕೆ ಸಮಯದಲ್ಲಿ ಏನೆಲ್ಲಾ ಆಗಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ. ನಿರ್ಮಾಪಕರ ಪುತ್ರ ರಾಹುಲ್ ನಮ್ಮ ಪ್ರೋಮೋ ನೋಡಿ ತಂದೆಗೆ ತಿಳಿಸಿದ್ದ. ಚಿಕ್ಕದಾಗಿ ಅಂತ ಆರಂಭಿಸಿದ್ದು,ಅದ್ದೂರಿ ವೆಚ್ಚದ ಸಿನಿಮಾ ಆಗಿ ರೂಪುಗೊಂಡಿತು ಎಂದರು.   ಇನ್ನೊಬ್ಬ ನಾಯಕ ನಿರಂತ್ಗೆ ಕೂಡ ಇದು ಮೊದಲ ಚಿತ್ರ. ರಂಗಾಯಣ ರಘು, ರಾಕ್ಲೈನ್ ಸುಧಾಕರ್ ಅಚ್ಚುತ್ಕುಮಾರ್, ವಿಜಯ ಚಂಡೂರು, ಅರುಣಿ ಬಾಲರಾಜ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.  ಒಟ್ಟಾರೆ ಯುವಕರ ಬಳಗ ಸೆರಿಕೊಂಡು ಒಂದು ವಿಭಿನ್ನ ಪ್ರಯತ್ನ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಇನ್ನೇನಿದ್ದರೂ ಪ್ರೇಕ್ಷಕರು ನೋಡಿ ನಿರ್ಧರಿಸಬೇಕಿದೆ.

► Follow us on –  Facebook / Twitter  / Google+

Sri Raghav

Admin