ಈ ಸಂಜೆ ಹೆಸರಲ್ಲಿ ಸುಳ್ಳು ಸುದ್ದಿ ಕುರಿತು ನಮ್ಮ ಸ್ಪಷ್ಟನೆ

Eesanje--0111

ನಿನ್ನೆ ನಮ್ಮ ಈ ಸಂಜೆ ಪತ್ರಿಕೆಯ ಹೆಸರಿನ ಅಡಿಯಲ್ಲಿ ವಾಟ್ಸ್ ಅಪ್ ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ಮೇ 5 ರಂದು ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ನೀತಿಸಂಹಿತೆ ಜಾರಿಯಾಗಲಿದೆ ಎಂಬ ಸುದ್ದಿಯನ್ನು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ನಮ್ಮ ಪತ್ರಿಕೆಯಲ್ಲಾಗಲಿ ಇಲ್ಲವೇ ಪತ್ರಿಕೆಯ ಅಧಿಕೃತ ವೆಬ್ ಸೈಟ್ ನಲ್ಲಾಗಲಿ ಇಂತಹ ಸುದ್ದಿಯನ್ನು ಪ್ರಕಟಿಸಿಲ್ಲ. ಪತ್ರಿಕೆಯ ಮುಖಪುಟದಂತೆ ವಿನ್ಯಾಸಗೊಳಿಸಿ ಪತ್ರಿಕೆಗೆ ಕೆಟ್ಟ ಹೆಸರು ತರಲು ಇಂತಹ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಮೂಲಕ ನಾವು ಸ್ಪಷ್ಟಪಡಿಸುವುದೇನೆಂದರೆ ರಾಜ್ಯ ವಿಧಾನಸಭೆಯ ಚುನಾವಣೆ ವೇಳಾಪಟ್ಟಿ ಕುರಿತು ಇದುವರೆಗೆ ಆಧಾರ ರಹಿತ ಯಾವುದೇ ಮಾಹಿತಿಯನ್ನು ಪ್ರಕಟಿಸಿರುವುದಿಲ್ಲ. ನಾವು ಈ ವಿಚಾರದ ಬಗ್ಗೆ ಸೈಬರ್ ಠಾಣೆಗೆ ದೂರು ನೀಡಲಿದ್ದೇವೆ ಎಂದು ಈ ಮೂಲಕ ಈ ಸಂಜೆ ಸ್ಪಷ್ಟಪಡಿಸುತ್ತದೆ. – ಸಂಪಾದಕರು

Sri Raghav

Admin