ಉಗ್ರರ ಹತ್ಯೆ : ವಿಜಯೋತ್ಸವ

Spread the love

5

ಹುನಗುಂದ,ಅ.3- ಪಾಕ್ ಆಕ್ರಮಿತ ಕಾಶ್ಮೀರ ಗಡಿಯಲ್ಲಿದ್ದ ಪಾಕಿಸ್ತಾನಿ ಉಗ್ರರ ಅಡ್ಡೆಯ ಮೇಲೆ ದಾಳಿ ಮಾಡಿ 40 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೈನಿಕರ ಸಾಹಸ ಮೆಚ್ಚಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ವಿಜಯೋತ್ಸವ ಆಚರಿಸಿದರು. ನಗರದ ಮಹಾಂತ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿ ಕಾರ್ಯಕರ್ತರಲ್ಲಿ ಪಾಲ್ಗೊಂಡು ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಯ್ಯ ಮೂಗನೂರಮಠ ಮಾತನಾಡಿ ಉಗ್ರರನ್ನು ಹತ್ಯೆ ಮಾಡುವ ಮೂಲಕ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಯೋಧರು ತಕ್ಕಪಾಠ ಕಲಿಸಿ ಭಾರತದ ರಕ್ಷಣಾ ಸಾಮಥ್ರ್ಯವನ್ನು ತೋರಿಸಿದ್ದಾರೆ. ಇನ್ನು ಮುಂದಾದರು ಪಾಕಿಸ್ತಾನ ಪಾಠ ಕಲಿಯಲಿ ಎಂದರು.

ಎರಡೂವರೆ ವರ್ಷಗಳ ಅಧಿಕಾರಾವದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಷ ಪ್ರವಾಸ ಕೈಗೊಳ್ಳುವ ಮೂಲಕ ಎಲ್ಲ ದೇಶಗಳ ಬೆಂಬಲಗೊಳಿಸುವಲ್ಲಿ ಸಫಲರಾಗಿದ್ದಾರಲ್ಲದೇ ಉಗ್ರರನ್ನು ಸದೆಬಡಿಯಲು ಪೀಠಿಕೆ ಹಾಕಿದ್ದಾರೆ ಎಂದರು. ಪಕ್ಷದ ಕಾರ್ಯದರ್ಶಿ ಮಲ್ಲಿಕಾರ್ಜುನ ಚೂರಿ, ಮುತ್ತಣ್ಣ ಮೇಟಿ, ಶೇಖರ ಬಡಿಗೇರ, ಬಸನಗೌಡ ತಮ್ಮಣ್ಣವರ, ಪ್ರದೀಪ ತೆಗ್ಗಿನಮಠ, ಮಂಜು ಆಲೂರ, ವಾದಿರಾಜ ದೇಶಪಾಂಡೆ, ಮುಸ್ತಾನ ಬಿಜಾಪೂರ, ಚೇತನ ಮುಕ್ಕಣ್ಣವರ, ಶಾಂತ ಕುಮಾರ ಮೂಕಿಹಾಳ ಇತರರು ಇದ್ದರು.

 

► Follow us on –  Facebook / Twitter  / Google+

Sri Raghav

Admin