ಉಗ್ರ ಇಮ್ರಾನ್ಗೆ ನಾಳೆ ಶಿಕ್ಷೆ ಪ್ರಕಟ
ಬೆಂಗಳೂರು, ಅ.4-ನಗರದಲ್ಲಿ ಉಗ್ರ ಕೃತ್ಯ ಸಂಚು ರೂಪಿಸಿದ್ದ ಇಮ್ರಾನ್ ಬಿಲಾಲ್ ಅಪರಾಧಿ ಎಂದು ಸಾಬೀತಾಗಿದ್ದು, ಇಲ್ಲಿನ 56ನೆ ಸೆಷನ್ ಕೋರ್ಟ್ ನಾಳೆ ಶಿಕ್ಷೆ ಪ್ರಮಾಣವನ್ನು ಘೋಷಿಸಲಿದೆ.2008ರಲ್ಲಿ 56ನೆ ಸೆಷನ್ ಕೋರ್ಟ್ ನ್ಯಾಯಾಧೀಶರಾದ ಎನ್. ಕೊಟ್ರಯ್ಯ ಅವರು ನಾಳೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.2008ರಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಇಮ್ರಾನ್ ಬಿಲಾಲ್ ಸಂಚು ರೂಪಿಸಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹಾಗೂ ಜೆ.ಜೆ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.ಈತನಿಂದ ಎ.ಕೆ.56 ಗ್ರೇನೆಡ್ ಬಾಂಬ್, ಸ್ಯಾಟ್ಲೈಟ್ ಪೊನ್ ವಶಪಡಿಸಿಕೊಂಡಿದ್ದರು. ಈತನ ದುಷ್ಕoತ್ಯ ದ ಬಗ್ಗೆ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಿಸಿದ್ದು, ನಾಳೆ ಶಿಕ್ಷೆ ಪ್ರಕಟಿಸಲಿದೆ.