ಉಗ್ರ ಇಮ್ರಾನ್ ಬಿಲಾಲ್‍ಗೆ ಜೀವಾವಧಿ ಶಿಕ್ಷೆ ಪ್ರಕಟ

Imran-Bilal

ಬೆಂಗಳೂರು, ಅ.5- ಭಯೋತ್ಪಾದಕ ಇಮ್ರಾನ್ ಬಿಲಾಲ್‍ಗೆ ಬೆಂಗಳೂರಿನ 56ನೆ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶರಾದ ಕೊಟ್ರಯ್ಯ ಎಂ.ಹಿರೇಮಠ್ ಅವರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಈತನ ವಿರುದ್ಧ 8 ಸೆಕ್ಷನ್‍ಗಳನ್ನು ಹಾಕಲಾಗಿತ್ತು. ಮೂರು ಸೆಕ್ಷನ್‍ಗಳ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಉಳಿದ ಸೆಕ್ಷನ್‍ಗಳ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಿದೆ. ಬೆಂಗಳೂರಿನ ಹಲವೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕ ಇಮ್ರಾನ್ ಬಿಲಾಲ್‍ನನ್ನು 2007ರಲ್ಲಿ ಸಿಸಿಬಿ ಪೆÇಲೀಸರು ಬಂಧಿಸಿದ್ದರು.

ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ವಿಪ್ರೋ  ಹಾಗೂ ಇನ್ಫೋಸಿಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಈತ ಹೊಸಪೇಟೆಯಿಂದ ಬೆಂಗಳೂರಿಗೆ ಖಾಸಗಿ ಬಸ್‍ನಲ್ಲಿ ಆಗಮಿಸುತ್ತಿದ್ದ ವೇಳೆ ಗೊರಗುಂಟೆ ಪಾಳ್ಯದ ಬಳಿ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಈತ ಮೂಲತಃ ಜಮ್ಮು-ಕಾಶ್ಮೀರದವನು. ಈತನಿಂದ ಎಕೆ-56 ರೈಫಲ್, 5 ಗ್ರೆನೇಟ್‍ಗಳು, ಸ್ಯಾಟಲೈಟ್ ಪೋ ನನ್ನು ವಶಪಡಿಸಿಕೊಳ್ಳಲಾಗಿತ್ತು. ನಿನ್ನೆ ಉಗ್ರ ಬಿಲಾಲ್ ಅಪರಾಧಿ ಎಂದು ತೀರ್ಪು ನೀಡಿದ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

► Follow us on –  Facebook / Twitter  / Google+

Sri Raghav

Admin