ಉಡುಗೊರೆಯಾಗಿ ಬಂದಿದ್ದ ಬಿಎಂಡಬ್ಲ್ಯುಕಾರ್’ನ್ನು ಹಿಂದಿರುಗಿಸಿದ ದೀಪಾ
ಹೈದರಾಬಾದ್,ಅ.12-ರಿಯೋ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಉಡುಗೊರೆಯಾಗಿ ಬಂದಿದ್ದ ದುಬಾರಿ ಬಿಎಂಡಬ್ಲ್ಯು ಕಾರನ್ನು ಜೆಮ್ನಾಸ್ಟಿಕ್ ಪಟು ದೀಪಾ ಕರ್ಮಕರ್ ವಾಪಸ್ ನೀಡಲು ನಿರ್ಧರಿಸಿದ್ದಾರೆ. ಕಾರು ನಿರ್ವಹಣಾ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಕಾರನ್ನು ಉದ್ಯಮಿಗೆ ವಾಪಸ್ ನೀಡಲು ದೀಪಾ ಮುಂದಾಗಿದ್ದಾರೆ. ರಿಯೋ ಒಲಿಪಿಂಕ್ಸ್ ಫೈನಲ್ನಲ್ಲಿ ಅಪಾಯಕಾರಿ ವಾಲ್ಟ್ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಕ್ಕೆ ಉದ್ಯಮಿಯೊಬ್ಬರು ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರು.
► Follow us on – Facebook / Twitter / Google+
Facebook Comments