ಉತ್ತರಕೊರಿಯಾದ ಉದ್ದಟತನದ ಬಗ್ಗೆ ಚರ್ಚಿಸಲು ಭದ್ರತಾ ಮಂಡಳಿ ತುರ್ತು ಸಭೆಗೆ ಮನವಿ
ವಿಶ್ವಸಂಸ್ಥೆ, ಫೆ.13– ಕ್ಷಿಪಣಿ ಪರೀಕ್ಷೆ ನಡೆಸಿ ಆತಂಕ ಸೃಷ್ಟಿಸಿರುವ ಉತ್ತರಕೊರಿಯಾದ ಉದ್ದಟತನದ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೈ ಕರೆಯು ವಂತೆ ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮನವಿ ಮಾಡಿವೆ. ಈ ಗಂಭೀರ ವಿಷಯದ ಬಗ್ಗೆ ಮಂಡಳಿಯು ಇಂದು ಮಹತ್ವದ ಸಮಾಲೋಚನೆ ನಡೆಸುವ ನಿರೀಕ್ಷೆಯೂ ಇದೆ.
ಖಡಾಂತರ ಕ್ಷಿಪಣಿ ಪರೀಕ್ಷೆಯನ್ನು ತಾನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯಾ ಖಚಿತ ಪಡಿಸಿದೆ. ಈ ಬೆಳವಣಿಗೆ ಅಮೆರಿಕ ಅಧ್ಯಕ್ಷರನ್ನು ಕಂಗೆಡಿಸಿದ್ದು, ಏಷ್ಯಾ ಪ್ರಾಂತ್ಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕೊರಿಯಾ ಫೆ.12ರಂದು ಖಡಾಂತರ ಕ್ಷಿಪಣಿ ಪ್ರಯೋಗ ನಡೆಸಿರುವ ಕುರಿತು ಅಮೆರಿಕದೊಂದಿಗೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಮನವಿ ಮಾಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕೆಣಕುವ ಉದ್ದೇಶದಿಂದ ಕಲಹಪ್ರಿಯ ದೇಶ ಉತ್ತರ ಕೊರಿಯಾ ಖಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿತ್ತು. ಇರಾನ್ ಈಗಾಗಲೇ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿರುವಾಗಲೇ ಹೊಸ ಅಧ್ಯಕ್ಷರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಉತ್ತರ ಕೊರಿಯಾ ಈ ದುಸ್ಸಾಹಸಕ್ಕೆ ಕೈಹಾಕಿತ್ತು. ಉತ್ತರ ಪಯೊನ್ಗನ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿರುವ ಬಾಂಗ್ಯೋನ್ ವಾಯು ನೆಲೆಯಿಂದ ನಿನ್ನೆಬೆಳಿಗ್ಗೆ 7.55ರಲ್ಲಿ ಕ್ಷಿಪಣಿಯನ್ನು ಹಾರಿಸಲಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >