ಉತ್ತರಪ್ರದೇಶದಲ್ಲಿ ಹಳಿತಪ್ಪಿದ ಶಕ್ತಿಕುಂಜ್ ಎಕ್ಸ್ ಪ್ರೆಸ್ ರೈಲಿನ 7 ಬೋಗಿಗಳು

Spread the love

Train---01

ಲಕ್ನೋ, ಸೆ.7-ಉತ್ತರಪ್ರದೇಶದಲ್ಲಿ ರೈಲು ಹಳಿ ತಪ್ಪಿದ ಮತ್ತೊಂದು ದುರ್ಘಟನೆ ಮರುಕಳಿಸಿದೆ. ಸೋನ್‍ಭದ್ರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಜಬಲ್ಪರ್ ಮಾರ್ಗದ ಶಕ್ತಿಕುಂಜ್ ಎಕ್ಸ್‍ಪ್ರೆಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿ ಕೆಲವರಿಗೆ ಗಾಯಗಳಾಗಿವೆ.  ಪಿಯೂಷ್ ಗೋಯೆಲ್ ರೈಲ್ವೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಭವಿಸಿದ ಮೊದಲ ದುರ್ಘಟನೆ ಇದಾಗಿದೆ. ಬೆಳಗ್ಗೆ 6.25ರಲ್ಲಿ ಈ ಅವಘಡ ಸಂಭವಿಸಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮಾರ್ಗವನ್ನು ತೆರವುಗೊಳಿಸಿ ಇತರ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅನಿಲ್ ಸಕ್ಸೇನಾ ಹೇಳಿದ್ದಾರೆ.

Train---04

ಹಳಿತಪ್ಪಿದ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಉಳಿದ ಕೋಚ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. 7.28ರಲ್ಲಿ ಶಕ್ತಿಕುಂಜ್ ಎಕ್ಸ್‍ಪ್ರೆಸ್ ರೈಲು ಪ್ರಯಾಣ ಮುಂದುವರಿಸಿತು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.  ಈ ಅವಘಡ ಸಂಭವಿಸಿದಾಗ ರೈಲು ಗಂಟೆಗೆ 40 ಕಿ.ಮೀ.ವೇಗದಲ್ಲಿ ಚಲಿಸುತ್ತಿತ್ತು. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಕಳೆದ ಒಂದು ತಿಂಗಳಿನಲ್ಲಿ ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿದ ಮೂರನೇ ಪ್ರಕರಣ ಇದಾಗಿದೆ. ಆಗಸ್ಟ್ 19ರಂದು ಮುಜಾಫರ್‍ನಗರ್‍ನಲ್ಲಿ ಉತ್ಕಲ್ ಎಕ್ಸ್‍ಪ್ರೆಸ್ ಹಳಿ ತಪ್ಪಿ 22 ಮಂದಿ ಮೃತಪಟ್ಟು, 156 ಮಂದಿ ಗಾಯಗೊಂಡಿದ್ದರು. ಆಗಸ್ಟ್ 23ರಂದು ಔರೈಯಾ ಜಿಲ್ಲೆಯಲ್ಲಿ ಕೈಫಿಯಾತ್ ಎಕ್ಸ್‍ಪ್ರೆಸ್‍ನ 10 ಬೋಗಿಗಳು ಹಳಿಯಿಂದ ಹೊರಸರಿದು ಸುಮಾರು 100 ಪ್ರಯಾಣಿಕರು ಗಾಯಗೊಂಡಿದ್ದರು.

Train---05

Train---03

Train---02

Sri Raghav

Admin