ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಕಂದಕಕ್ಕೆ ಜೀಪ್ ಉರುಳಿ 8 ಸಾವು

Spread the love

8-Killed

ಡೆಹ್ರಾಡೂನ್, ಮಾ.17 : ಜೀಪೊಂದು ಅಳವಾದ ಕಂದಕ್ಕೆ ಉರುಳಿ ಎಂಟು ಮಂದಿ ಮೃತಪಟ್ಟು ಇತರ 12 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಸಂಭವಿಸಿದೆ. ಕಿಕ್ಕಿರಿದಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕ್ಕೆ ಉರುಳಿ ಬಿತ್ತು ಎಂದು ಸಾಲ್ಟ್ ಪೊಲೀಸ್ ಠಾಣೆ ಮೇಲ್ವಿಚಾರಕ ಠಾಕುರ್ ಸಿಂಗ್ ತಿಳಿಸಿದ್ದಾರೆ.  ಬತ್ರೋಜ್‍ಖಾನ್-ರಾಮ್‍ನಗರ ರಸ್ತೆಯ ಭೌನ್‍ಖಾಲ್‍ನಲ್ಲಿ ಈ ಘಟನೆ ಸಂಭವಿಸಿದೆ. ಐವರು ಮಹಿಳೆಯರೂ ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟು, ಇತರ 12 ಮಂದಿ ತೀವ್ರ ಗಾಯಗೊಂಡಿದ್ಧಾರೆ. ಗಾಯಾಳುಗಳನ್ನು ರಾಮ್‍ನಗರದ ಆಸ್ಪತ್ತೆಯೊಂದಕ್ಕೆ ಸೇರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin