ಉತ್ತರ ಸಿರಿಯಾದಲ್ಲಿ ಐಎಸ್ ಉಗ್ರರ ವಿರುದ್ಧ ಭೀಕರ ಕಾಳಗ : 30,000 ನಾಗರಿಕರ ಪಲಾಯನ
ಬೈರುತ್, ಮಾ.5-ಉತ್ತರ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ವಿರುದ್ಧ ಭೀಕರ ಕಾಳಗದಲ್ಲಿ ತೊಡಗಿರುವ ಸರ್ಕಾರಿ ಸೇನಾಪಡೆಗಳು ಮುನ್ನಡೆ ಸಾಧಿಸುತ್ತಿವೆ. ಇದೇ ವೇಳೆ ಸಾವಿರಾರು ನಾಗರಿಕರು ಪ್ರಾಣಭೀತಿಯಿಂದ ಮನೆಗಳನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ. ರಷ್ಯಾ ವಾಯುಪಡೆಯ ಬೆಂಬಲದೊಂದಿಗೆ ಸಿರಿಯಾ ಅಧ್ಯಕ್ಷ ಬಷರ್ ಅಸ್ಸಾದ್ ನೇತೃತ್ವದ ಸೇನಾಪಡೆಗಳು ಉತ್ತರ ಸಿರಿಯಾದಲ್ಲಿ ಐಎಸ್ ಉಗ್ರರನ್ನು ಮಟ್ಟ ಹಾಕಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಸಾವು-ನೋವಿನ ಭಯದಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30,000ಕ್ಕೂ ಹೆಚ್ಚು ನಾಗರಿಕರು ಅಲೆಪ್ರೋ ಪ್ರಾಂತ್ಯದಿಂದ ಪಲಾಯನ ಮಾಡಿದ್ದಾರೆ ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಕಣ್ಗಾವಲು ಸಮಿತಿ ತಿಳಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >