ಉದಾಸೀನ ಆಡಳಿತ : ಜಿಲ್ಲಾಸ್ಪತ್ರೆ ಆವರಣ ಧೂಳುಮಯ

Spread the love

7

ಬೆಳಗಾವಿ,ಫೆ.8- ಉದಾಸೀನ ಆಡಳಿತ ವ್ಯವಸ್ಥೆಯ ಪರಿ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನುವುದಕ್ಕೆ ಇಲ್ಲಿನ ಜಿಲ್ಲಾಸ್ಪತ್ರೆ ಆವರಣ ನಿದರ್ಶನವಾಗಿದೆ.ಆವರಣ ತುಂಬ ರಸ್ತೆಯಿಲ್ಲದೆ ಕಲ್ಲೆದ್ದು ದೂಳುಮಯವಾಗಿದ್ದು ತಿರುಗಾಡುವುದು ಕಷ್ಟವಾಗಿದೆ. ಒಂದೇ ಒಂದು ಬೈಕ್ ತೆರಳಿದರೆ ಸಾಕು ಆಸ್ಪತ್ರೆಯ ಒಳಕ್ಕೆ ಹಿಡಿಯಷ್ಟು ಧೂಳು ಹಾರಿ ನುಗ್ಗುತ್ತದೆ.ಕಾಂಗ್ರೆಸ್ ಸರಕಾರ ರಚನೆಯಾದ ಹೊಸ್ತಿಲಲ್ಲೇ ಆಗಿನ ಸಚಿವ ಸತೀಶ ಜಾರಕಿಹೊಳಿ ಪರಿಶೀಲನೆಗಾಗಿ ಭೇಟಿ ನೀಡಿದ್ದರು. ಆವರಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಇದೇ ತಗ್ಗುಗುಂಡಿ ಧೂಳು ರಸ್ತೆಯಲ್ಲಿ ಮಳೆಯಿಂದ ತುಂಬಿದ್ದ ನೀರುಗುಂಡಿ ಕೆಸರಲ್ಲಿ ತಿರುಗಾಡಿ ಎಲ್ಲವನ್ನೂ ಸರಿಪಡಿಸುವ ಮಾತು ಆಡಿದ್ದರು.ಈಗ ಅವರ ಸರಕಾರದ ಅವಧಿ ಮುಗಿಯಲು ವರ್ಷದ ಅವಧಿ ಬಾಕಿ ಇದ್ದರೂ ರಸ್ತೆ ಮಾಡಿಸಿ ಜಿಲ್ಲಾಸ್ಪತ್ರೆಯ ಸೌಕರ್ಯಗಳನ್ನು ಹೆಚ್ಚಿಸುವುದಿರಲಿ ಇದ್ದ ರಸ್ತೆ ವ್ಯವಸ್ಥೆಯೂ ಕೆಟ್ಟು ಹೋಗಿದೆ.

ಗೇಟ್ ಇಲ್ಲ : ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಬಳಿ ಗೇಟ್ ಇಲ್ಲ. ಅಲ್ಲಿಂದ ಸಾರ್ವಜನಿಕವಾಹನಗಳು ಒಳನುಗ್ಗಿ ಬೀಮ್ಸ್ ಎದುರಿಂದ ಮತ್ತೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಸೇರುತ್ತವೆ. ಯಾರೂ ಹೇಳುವವರು ಕೇಳುವವರು ಇಲ್ಲವೇ ಇಲ್ಲ.ಕ್ಯಾಸ್ಯುಲಿಟಿಯಿಚಿದ ಹೆರಿಗೆ ವಾರ್ಡ್ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‍ವರೆಗೆ ರಸ್ತೆ ಡಾಂಬರೀಕರಣ ಮಾಡಿಸುವ ತುರ್ತು ಕ್ರಮದ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಆಡಳಿತಕ್ಕೆ ಒತ್ತಡ ತಂದಿದ್ದು, ಉದಾಸೀನತೆ ಬಗ್ಗೆ ಕಿಡಿಕಾರಿದ್ದಾರೆ.ಮಾಧ್ಯಮಗಳಲ್ಲಿ ಪ್ರಕಟವಾದ ಸತತ ವರದಿ ಹಾಗೂ ಸಾರ್ವಜನಿಕರು, ಸಂಘ ಸಂಸ್ಥೆಗಳು ಕಳೆದ ನಾಲ್ಕೈದು ವರ್ಷಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರಿಂದ ಜಿಲ್ಲಾ ಕೇಂದ್ರ ಬಸ್‍ನಿಲ್ದಾಣ ಹೊಸ ಕಟ್ಟಡವಾಗುವುದು ಕೊನೆಗೂ ನಿಶ್ಚಿತವಾಗಿದೆ. ಆದರೂ, ಸರಕಾರ ಮತ್ತು ಜನಪ್ರತಿನಿಧಿಗಳು ಇಷ್ಟರ ಮಟ್ಟಿಗೆ ಉದಾಸೀನ ಆಗಬಾರದು ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.ಜಿಲ್ಲಾಸ್ಪತ್ರೆ ಆವರಣ ಡಾಂಬರೀಕರಣಗೊಂಡು ಸ್ವಚ್ಛತೆ ಕಾಣುವುದೇ ಕಾಯ್ದು ನೋಡಬೇಕಿದೆ. ಸ್ಮಾರ್ಟ್ ಸಿಟಿ, ಎರಡನೇ ರಾಜಧಾನಿ, ನಾನು ರಾಜಕೀಯ ಮುತ್ಸದ್ಧಿ ಎಂದೆಲ್ಲ ಭಾಷಣ ಬಿಗಿಯುವುದನ್ನು ನಿಲ್ಲಿಸಿ ರಾಜಕಾರಣಿಗಳು ಸಾರ್ವಜನಿಕ ಕೆಲಸಗಳನ್ನು ಮಾಡಿಸುವತ್ತ ಗಮನ ಹರಿಸಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin