ಉದ್ಯಮಿ ಪುತ್ರ ಕಿಡ್ನಾಪ್ : ಬೆಂಗಳೂರನ್ನು ಬೆಚ್ಚಿ ಬೆಚ್ಚಿಬೀಳಿಸಿದ ಘಟನೆ

Spread the love

Mayank

ಬೆಂಗಳೂರು, ನ.26– ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿ, ಟಿಂಬರ್ ವ್ಯಾಪಾರಿಯೊಬ್ಬರ ಪುತ್ರನನ್ನು ಸಿನಿಮೀಯ ರೀತಿಯಲ್ಲಿ ಅಪಹರಣಕಾರರು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಅಯ್ಯಪ್ಪ ನಗರದ ನಿವಾಸಿ ಟಿಂಬರ್ ಮರ್ಚೆಂಟ್ ಹರೀಶ್ ಎಂಬುವರ 10 ವರ್ಷದ ಪುತ್ರ ಅಪಹರಣಕ್ಕೊಳಗಾಗಿರುವ ವಿದ್ಯಾರ್ಥಿ. ಅಯ್ಯಪ್ಪ ನಗರದ ಮುಖ್ಯರಸ್ತೆಯಲ್ಲಿನ ಪ್ರತಿಷ್ಠಿತ ಶಾಲೆಯಲ್ಲಿ 4ನೆ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ತಾತನ ಜೊತೆ ಮನೆಯಿಂದ ಶಾಲೆಗೆ ತೆರಳುತ್ತಿದ್ದನು. ಈ ವೇಳೆ ಕಾರಿನಲ್ಲಿ ಇವರನ್ನು ಹಿಂಬಾಲಿಸಿದ ಅಪಹರಣಕಾರರು ಅಯ್ಯಪ್ಪ ರಸ್ತೆಯ ಹೂಡಿ ಸರ್ಕಲ್ ಬಳಿ ಬಾಲಕನನ್ನು ಅಪಹರಿಸಿ ಪರಾರಿಯಾಗಿದ್ದಾರೆ.

ತಕ್ಷಣ ಕೆ.ಆರ್.ಪುರಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಅಪಹರಣಕಾರರ ಪತ್ತೆಗಾಗಿ ಪೂರ್ವವಿಭಾಗದ ಡಿಸಿಪಿ ಸತೀಶ್‍ಕುಮಾರ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿ ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin