ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್

Bhaskar-Shetty--Murder

ಉಡುಪಿ, ಆ.16– ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣ ಯಾಕೋ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ. ಜನರು ತಲೆಗೊಂದು ಥರ ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದರೆ, ಜನರು ತಮ್ಮದೇ ಊಹಾಲೋಕದಲ್ಲಿ ತನಿಖೆ ವಿಮರ್ಶಿಸುತ್ತಿದ್ದಾರೆ. ಈಗ ಉಡುಪಿ ಜಿಲ್ಲೆಯಲ್ಲಿ ಭಾಸ್ಕರ್ ಶೆಟ್ಟಿ ಕೊಲೆಯದ್ದೇ ಗಾಸಿಪ್. ಒಬ್ಬೊರೊಬ್ಬರದ್ದು ಒಂದೊಂದ್ ರೀತಿಯ ವಿಮರ್ಶೆ. ಇವುಗಳಲ್ಲಿ ಕೆಲವು ಸತ್ಯಕ್ಕೆ ಹತ್ತಿರವಿದ್ದರೆ, ಇನ್ನು ಕೆಲವು ಕಲ್ಪನಾತೀತ. ಭಾಸ್ಕರ ಶೆಟ್ಟಿಯನ್ನು ಕೊಂದಿದ್ದು ನಾವೇ ಎಂದು ಆರೋಪಿಗಳು ಒಪ್ಪಿಕೊಂಡರೂ ಜನರಿಗೆ ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂಬೈನಿಂದ ಬಂದ ಪ್ರೊಫೆಷನಲ್ ಕೊಲೆಗಡುಕರು ಭಾಸ್ಕರ್ ಶೆಟ್ಟಿಯನ್ನು ಕೊಂದಿದ್ದಾರೆ. ಆದರೆ, ಪತ್ನಿ, ಪುತ್ರ ಸೇರಿ ಶವವನ್ನು ವಿಲೇವಾರಿ ಮಾಡಿದ್ದಾರೆ ಎನ್ನುವುದು ಅನೇಕರ ಸಂಶಯ. ಅಲ್ಲದೆ, ರಾಜೇಶ್ವರಿ ಭಾವ ಹಾಗೂ ಇನ್ನೊಬ್ಬ ಸಂಬಂಧಿ ಕೂಡ ಕೊಲೇಲಿ ನೇರ ಭಾಗಿಗಳಂತೆ. ಅಸಲಿಗೆ ಇಬ್ಬರೂ ಪೊಲೀಸ್ ವಶದಲ್ಲಿದ್ದಾರೆ.

ನವನೀತ ಪ್ರನಾಳ ಶಿಶು..! ನಿರಂಜನನಿಗೆ ಗುರೂಜಿ ಸಹಾನುಭೂತಿ..?

ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿರುವ ಪುತ್ರ ನವನೀತ, ಪ್ರನಾಳ ಶಿಶು ಎನ್ನುವುದು ಬಂಧು ವರ್ಗದ ಅಭಿಮತ. ಬಹುಕಾಲ ಮಕ್ಕಳಾಗದ ಕಾರಣ ವೈಜ್ಞಾನಿಕ ರೀತಿಯಲ್ಲಿ ಈ ಮಗುವನ್ನು ಪಡೆದಿದ್ದಾರಂತೆ. ನಿರಂಜನ ಭಟ್‍ಗೆ ಬೆಂಗಳೂರಿನಲ್ಲಿರುವ ಕರಾವಳಿ ಮೂಲದ ಗುರೂಜಿಯೊಬ್ಬರು ನಿಂತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಅಂದ ಹಾಗೆ ಭಾಸ್ಕರ್ ಶೆಟ್ಟಿ ಕೊಲೆಯೇ ಆಗಿಲ್ಲ. ಬೇರೆಲ್ಲೋ ಇದ್ದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮುಂದೆ ಉಡುಪಿಗೆ ಬರುತ್ತಾನಂತೆ. ಹೀಗೆ ಕೆಲವು ವದಂತಿಗಳು ಸತ್ಯಕ್ಕೆ ಹತ್ತಿರವಾದರೆ, ಇನ್ನೂ ಕೆಲವಕ್ಕೆ ತಲೆಯೂ ಇಲ್ಲ, ಬುಡವೂ ಇಲ್ಲ. ಈ ಮಧ್ಯೆ ಪೊಲೀಸ್ ಇಲಾಖೆ ಎಲ್ಲ ವದಂತಿಗಳನ್ನೂ ತಳ್ಳಿ ಹಾಕಿದ್ದಾರೆ. ಆದರೆ, ಉದ್ಯಮಿಯ ಹತ್ಯೆಯ ಕೇಸ್ ಜನರನ್ನು ಎಷ್ಟರ ಮಟ್ಟಿಗೆ ಕಾಡಿದೆ ಎನ್ನುವುದು ಇದರಿಂದ ಅರಿವಾಗುತ್ತದೆ.

► Follow us on –  Facebook / Twitter  / Google+

Sri Raghav

Admin