ಉದ್ಯಾನಗರಿಯಲ್ಲಿ ನಾಳೆ ಐಪಿಎಲ್ ಆಟಗಾರರ ಹರಾಜು

Spread the love

ipl

ಬೆಂಗಳೂರು, ಫೆ.19-ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಾಳೆ ಉದ್ಯಾನಗರಿಯಲ್ಲಿ ನಡೆಯಲಿದ್ದು , 8 ಫ್ರಾಂಚೈಸಿಗಳು(ತಂಡಗಳು) ಪ್ರಮುಖ ಆಟಗಾರರನ್ನು ಕೊಂಡುಕೊಳ್ಳಲು ಮುಂದಾಗಿವೆ.ಇದರಲ್ಲಿ ಇಂಗ್ಲೆಂಡ್, ವೆಸ್ಟ್‍ಇಂಡೀಸ್, ಆಫ್ಘಾನಿಸ್ತಾನ ಸೇರಿದಂತೆ ದೇಶೀಯ 350ಕ್ಕಿಂತ ಹೆಚ್ಚು ಆಟಗಾರರಿದ್ದು , ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿರುವ 76 ಆಟಗಾರರು ಹರಾಜಾಗಲಿದ್ದಾರೆ. ವೇಗದ ಬೌಲರ್ ಇಶಾಂತ್ ಶರ್ಮ, ಇರ್ಫಾನ್ ಪಠಾಣ್, ವರುಣ್ ಧವನ್ ಸೇರಿದಂತೆ ಪ್ರಮುಖ ಆಟಗಾರರು ಐಪಿಎಲ್ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರನ್ನು ಖರೀದಿಸಲು ಫ್ರಾಂಚೈಸಿಗಳು ಕೋಟ್ಯಂತರ ಹಣ ತೊಡಿಸಲು ಸಿದ್ದರಾಗಿದ್ದಾರೆ. ಇತ್ತೀಚೆಗಷ್ಟೇ ನಡೆದ ಸಯ್ಯದ್ ಮುಸ್ತಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ. ತಮಿಳುನಾಡಿನ ಎಡಗೈ ವೇಗದ ಬೌಲರ್ ಟಿ.ನಟರಾಜನ್, ದೆಹಲಿಯ ಕುಲ್ವಂತ್, ಕೇರಳದ ಬಸಿಲ್ ತಂಪಿ ಅವರ ಮೇಲೆ ಭಾರೀ ಬಿಡ್ಡಿಂಗ್ ನಡೆಯುವ ನಿರೀಕ್ಷೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin