ಉದ್ರಿಕ್ತರಿಂದ ಪೊಲೀಸ್ ಠಾಣೆಗೆ ಬೆಂಕಿ, ಹಲವು ಪೊಲೀಸರಿಗೆ ಗಾಯ

Police-Station

ಕೊಲ್ಕತಾ, ಜ.20-ಉದ್ರಿಕ್ತ ಗುಂಪೊಂದು ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಈ ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿರುವ ಘಟನೆ ಪಶ್ಚಿಮಬಂಗಾಳದ ಬುದ್ರ್ವಾನ್ ಜಿಲ್ಲೆಯ ಅಸುಗ್ರಾಮದಲ್ಲಿ ನಡೆದಿದೆ. ಈ ಪ್ರದೇಶದ ಶಾಲೆಯೊಂದರ ಬಳಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ರಸ್ತೆ ತಡೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಮೂವರು ಶಿಕ್ಷಕರನ್ನು ಬಂಧಿಸಿದರು. ಪೊಲೀಸ್ ಬಲಪ್ರಯೋಗದಲ್ಲಿ ಕೆಲವರಿಗೆ ಗಾಯಗಳಾದವು.
ಇದನ್ನು ಖಂಡಿಸಿ ಉದ್ರಿಕ್ತ ಗುಂಪೊಂದು ಅಸುಗ್ರಾಮ್ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತು.

ಬಿಲ್ಲು-ಬಾಣಗಳು, ಕಲ್ಲುಗಳು ಮತ್ತು ದೊಣ್ಣೆಗಳಿಂದ ಅಕ್ರಮಣ ಮಾಡಿದ ಪ್ರತಿಭಟನಕಾರರು ಠಾಣೆಯಲ್ಲಿದ್ದ ಪೀಠೋಪಕರಣ ಮತ್ತಿತ್ತರ ವಸ್ತುಗಳನ್ನು ಧ್ವಂಸಗೊಳಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಸುಗ್ರಾಮ್-ಗುಸ್ಕರ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin