ಉಪೇಂದ್ರರ ‘ಪ್ರಜಾಕೀಯ’ ಎಂಟ್ರಿ ಕುರಿತು ಪವರ್ ಮಿನಿಸ್ಟರ್ ಡಿಕೆಶಿ ಏನು ಹೇಳ್ತಾರೆ..? (Video)

Spread the love

ರಾಯಚೂರು, ಆ.12- ಚಿತ್ರನಟ ಉಪೇಂದ್ರ ರಾಜಕಾರಣಕ್ಕೆ ಬರುವುದಾದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.  ರಾಯಚೂರಿನಲ್ಲಿ ಏರ್ಪಡಿಸಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪೇಂದ್ರ ಅವರು ಈವರೆಗೆ ಚಲನಚಿತ್ರಗಳಲ್ಲಿ ಬಣ್ಣದೊಂದಿಗೆ ರಾಜಕೀಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಈಗ ಬಣ್ಣ ಹಚ್ಚದೆ ರಾಜಕೀಯಕ್ಕೆ ಬರುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲಿ ಎಂದು ಹೇಳಿದರು.

ಅವರು ಪ್ರತ್ಯೇಕ ಪಕ್ಷ ಕಟ್ಟುವುದಾದರೆ ಜಾತ್ಯತೀತವಾಗಿ, ಧರ್ಮಾತೀತವಾಗಿರಲಿ ಎಂದು ಸಲಹೆ ಮಾಡಿದರು.  ನನ್ನ ವಿರುದ್ಧ ಎಸ್.ಆರ್.ಹಿರೇಮಠ್ ಅವರು ಯಾರಿಗೆ ಬೇಕಾದರೂ ದೂರು ಕೊಡಲಿ. ಅದನ್ನು ಕಾನೂನು ರೀತಿ ಎದುರಿಸುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin