ಉಪ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಜೆಕೆಎಲ್ಎಫ್ ವರಿಷ್ಠನ ಬಂಧನ
ಶ್ರೀನಗರ, ಮಾ.19-ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಬಹಿಷ್ಕರಿಸಲು ಪ್ರತ್ಯೇಕತಾವಾದಿಗಳು ಮತದಾರರಿಗೆ ಕರೆ ನೀಡಿದ ನಂತರ ಜೆಕೆಎಲ್ಎಫ್ (ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್) ವರಿಷ್ಠ ಮಹಮದ್ ಯಾಸಿನ್ ಮಲಿಕ್ರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ಅಭಿಗುಜರ್ ಪ್ರದೇಶದ ಜೆಕೆಎಲ್ಎಫ್ ಕಚೇರಿಗೆ ನಿನ್ನೆ ಸಂಜೆ ಆಗಮಿಸಿದ ಪೊಲೀಸರು ಯಾಸಿನ್ರನ್ನು ಬಂಧಿಸಿದ್ದಾರೆ. ಉಪ ಚುನಾವಣಾ ಬಹಿಷ್ಕರಿಸುವ ಹೋರಾಟದ ನೇತೃತ್ವ ವಹಿಸುವುದನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಶ್ರೀನಗರ ಮತ್ತು ಅನಂತನಾಗ್ ಸಂಸದೀಯ ಕ್ಷೇತ್ರಗಳಿಗೆ ಕ್ರಮವಾಗಿ ಏ.9 ಮತ್ತು 12ರಂದು ಉಪಚುನಾವಣೆ ನಡೆಯಲಿದ್ದು, ಮತದಾನ ಬಹಿಷ್ಕರಿಸುವಂತೆ ಹುರಿಯತ್ ಕಾನ್ಫೆರನ್ಸ್ ಶುಕ್ರವಾರ ರ್ಯಾಲಿ ಆಯೋಜಿಸಿತ್ತು.
< Eesanje News 24/7 ನ್ಯೂಸ್ ಆ್ಯಪ್ >