ಉಭಯ ದೇಶಗಳ ಸಂಬಂಧ ಹಳಸಿದ್ದರೂ ನವಾಜ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮೋದಿ

Spread the love

Modi-Wish

ನವದೆಹಲಿ, ಡಿ.25-ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿದ್ದರೂ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ತಮ್ಮ ಸಹವರ್ತಿ ನವಾಜ್ ಷರೀಫ್ ಅವರಿಗೆ 67ನೇ ಜನ್ಮದಿನದ ಶುಭಾಶಯ ಕೋರಿದ್ದಾರೆ.   ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರು ಆರೋಗ್ಯಶಾಲಿಯಾಗಿ ದೀರ್ಘಕಾಲ ಬಾಳಲಿ ಎಂದು ಮೋದಿ ಟ್ವೀಟ್ ಮಾಡಿದ್ಧಾರೆ.  ಕಾಶ್ಮೀರ ಕಣಿವೆಯ ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭಾರತ-ಪಾಕಿಸ್ತಾನ ಸಂಬಂಧ ಹಳಸಿರುವ ಸಂದರ್ಭದಲ್ಲೇ ಮೋದಿ, ಷರೀಫ್ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವುದು ಅಚ್ಚರಿ ಮೂಡಿಸಿದೆ.

ಕಳೆದ ವರ್ಷ ಇದೇ ದಿನ ಮೋದಿ ಲಾಹೋರ್‍ನಲ್ಲಿ ವೈಯಕ್ತಿಕವಾಗಿ ಪಾಕ್ ಪ್ರಧಾನಿಯನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದರು. ಅಲ್ಲದೇ ಅವರ ಹತ್ತಿರದ ಸಂಬಂಧಿಯ ವಿವಾಹದಲ್ಲೂ ಭಾಗವಹಿಸಿ ಗಮನ ಸೆಳೆದಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin