ಉರಿ ಪಟ್ಟಣದಲ್ಲಿ ಇಬ್ಬರು ಜೆಇಎಂ ಉಗ್ರರ ಸೆರೆ
ಜಮ್ಮು, ಸೆ.25-ಜೈಷ್-ಇ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಗೆ ಭಯೋತ್ಪಾದನೆ ಕೃತ್ಯ ನಡೆಸಲು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ್ದ ಇಬ್ಬರು ಪಾಕಿಸ್ತಾನಿಯರನ್ನು ಭಾರತೀಯ ಸೇನೆ ಉರಿ ಪಟ್ಟಣದಲ್ಲಿ ಬಂಧಿಸಿದೆ. ಜೆಇಎಂ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಉರಿ ವಲಯದ ಗಡಿ ನಿಯಂತ್ರಣ ರೇಖೆ ಮೂಲಕ ನುಸುಳುವ ಉಗ್ರರಿಗೆ ಕುಕೃತ್ಯ ನಡೆಸಲು ಮಾರ್ಗದರ್ಶನ ನೀಡುತ್ತಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಇಬ್ಬರು ವ್ಯಕ್ತಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಸೇನೆಯ ಉದಾಂಪುರ್ ಕೇಂದ್ರ ಕಚೇರಿಯ ಉತ್ತರ ಕಮಾಂಡ್ನ ವಕ್ತಾರ ಕರ್ನಲ್ ಎಸ್.ಡಿ.ಗೋಸ್ವಾಮಿ ಹೇಳಿದ್ದಾರೆ.
ಸೇನೆ ಮತ್ತು ಬಿಎಸ್ಎಫ್ ಸೆ.21ರಂದು ಕೈಗೊಂಡ ಜಂಟಿ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಈ ಇಬ್ಬರನ್ನು ಬಂಧಿಸಲಾಗಿದೆ. ಇವರನ್ನು ಖಾಲಿಯಾನ ಕಲಾನ್ನ ಅಹಸಾನ್ ಖುರ್ಷಿದ್ ಅಲಿಯಾಸ್ ಡಿಸಿ ಹಾಗೂ ಪೋ ಟ್ಟಾ ಜಹಂಗೀರ್ನ ಫೈಸಲ್ ಹುಸೇನ್ ಅವಾನ್ ಎಂದು ಗುರುತಿಸಲಾಗಿದೆ. ಇಬ್ಬರಿಬ್ಬರನ್ನು ಎರಡು ವರ್ಷಗಳ ಹಿಂದೆ ಜೆಇಎಂನಿಂದ ನೇಮಕ ಮಾಡಿಕೊಳ್ಳಲಾಗಿತ್ತು.