ಉಷ್ಣಾಂಶ 50 ಡಿಗ್ರಿಗೇರಿದರೂ ಮದೀನಾ ಯಾತ್ರಿಕರ ಉತ್ಸಾಹ ಕುಗ್ಗಿಲ್ಲ

Temprature-Temp

ಮದೀನಾ, ಜೂ.3-ರಂಜಾನ್ ಸಂದರ್ಭದಲ್ಲಿ ಮುಸ್ಲಿಮರ ಪವಿತ್ರ ಸ್ಥಳ ಮದೀನಾ ಮತ್ತು ಸುತ್ತಮುತ್ತಲ ಚಾರಿತ್ರಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ.   ಹಗಲು ವೇಳೆ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ ಯಾತ್ರಿಕರ ಉತ್ಸಾಹ ತಗ್ಗಿಲ್ಲ. ಕ್ಯೂಬಾ, ಶಿಬ್ಲಟಯನ್, ಅಲ್-ಖಂದಕ್, ಅಲ್-ಘಮಾಮ, ಅಲ್-ಇಜಾಬ ಮಸೀದಿ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಭೇಟಿ ನೀಡುತ್ತಿದ್ದಾರೆ.ಮದೀನಾದ ಪ್ರವಾದಿ ಪ್ರಾರ್ಥನಾ ಮಂದಿರ ಬಳಿಕ ಭಾರೀ ಸಂಖ್ಯೆಯ ಮುಸ್ಲಿಮರು ಕ್ಯೂಬಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮದೀನಾದ ಅತ್ಯಂತ ದೊಡ್ಡ ಮಸೀದಿ ಎಂದು ಪರಿಗಣಿಸಲಾಗಿರುವ ಸೈಯದ್-ಸಲ್ ಶುಹಾ ಮಸೀದಿಯಲ್ಲಿ 15,000ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin