ಉ.ಪ್ರ. ನೂತನ ಬಿಜೆಪಿ ಸರ್ಕಾರದಲ್ಲಿ ಮುಸ್ಲಿಮರಿಗೂ ಆದ್ಯತೆ

Spread the love

Venkayya-Naidu--01

ಲಕ್ನೋ. ಮಾ.14-ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿದ್ದರೂ, ನೂತನ ಸರ್ಕಾರದಲ್ಲಿ ಆ ಕೋಮಿನ ಒಬ್ಬರು ಸಚಿವರಾಗಲಿದ್ದಾರೆ.   ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರಿಲ್ಲದಿದ್ದರೂ, ವಿಧಾನಪರಿಷತ್ತಿನಲ್ಲಿ ಆ ಸಮುದಾಯದ ಸದಸ್ಯರೊಬ್ಬರು ಇರುತ್ತಾರೆ. ಸರ್ಕಾರದಲ್ಲಿ ಮಸ್ಲಿಮರಿಗೆ ಪ್ರಾತಿನಿಧ್ಯ ಇದ್ದೇ ಇರುತ್ತದೆ ಎಂದು ಕೇಂದ್ರ ನಗರಾಭಿವೃದ್ದಿ ಸಚಿವ ಎಂ.ವೆಂಕಯ್ಯನಾಯ್ಡು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.  403 ಸದಸ್ಯ ಬಲದ ಉತ್ತರಪ್ರದೇಶ ವಿಧಾನಸಭೆಯಲ್ಲಿ 312 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಐತಿಹಾಸಿಕ ಗೆಲುವು ದಾಖಲಸಿದೆ.  ಮುಸ್ಲಿಂ ಸಮುದಾಯದಲ್ಲಿ ಬಿಜೆಪಿ ಸುಭದ್ರ ಮತಗಳ ಬುನಾದಿ ಹೊಂದಿಲ್ಲವಾದ್ದರಿಂದ ಸಂಪುಟದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಆ ಜನಾಂಗವನ್ನು ತನ್ನತ್ತ ಸೆಳೆಯಲು ಬಿಜೆಪಿ ಉದ್ದೇಶಿಸಿದೆ.

ಮುಸ್ಲಿಮರ ಒಂದು ವರ್ಗವು, ಅದರಲ್ಲೂ ಮಹಿಳೆಯರು ಮತ್ತು ಯುವಕರು ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯವನ್ನು ಒಪ್ಪಿಕೊಂಡಿದ್ದಾರೆ. ತ್ರಿ ವಳಿ ತಲಾಕ್ ಬಗ್ಗೆ ಪಕ್ಷ ಹೊಂದಿರುವ ನಿಲುವನ್ನು ಮಹಿಳೆಯರು ಸ್ವಾಗತಿಸಿದ್ದಾರೆ. ಹೀಗಾಗಿ ಆ ಕೋಮಿನ ಒಬ್ಬರಿಗೆ ಸಚಿವ ಸ್ಥಾನ ನೀಡಿ ಮುಸ್ಲಿಂ ಸಮುದಾಯಕ್ಕೆ ಹತ್ತಿರವಾಗುವುದು ಪಕ್ಷದ ಧ್ಯೇಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin