ಊಟದ ವಿಚಾರಕ್ಕೆ ವಧು-ವರರ ಕಡೆಯವರ ನಡುವೆ ಗಲಾಟೆ, ಮುರಿದು ಬಿದ್ದ ಮದುವೆ ….!

Marriage--01

ಬೆಂಗಳೂರು, ಏ.9-ರಾತ್ರಿ ನಡೆದ ಆರತಕ್ಷತೆಯಲ್ಲಿ ಊಟ ಸರಿಯಿಲ್ಲ ಎಂದು ವಧು-ವರರ ಕಡೆಯವರ ನಡುವೆ ನಡೆದ ಗಲಾಟೆಯಿಂದ ಮದುವೆಯೇ ನಿಂತುಹೋದ ಪ್ರಸಂಗ ನಗರದಲ್ಲಿ ನಡೆದಿದೆ.  ಕೋಣನಕುಂಟೆಯ ಸೌಧಾಮಿನಿ ಕಲ್ಯಾಣಮಂಟಪದಲ್ಲಿ ನಾಗೇಂದ್ರಪ್ರಸಾದ್ ಮತ್ತು ಶಿಲ್ಪಾ ಅವರ ವಿವಾಹದ ಆರತಕ್ಷತೆ ನಿನ್ನೆ ಸಂಜೆ ನಡೆದಿತ್ತು. ರಾತ್ರಿ ಕೆಲವರು ಊಟ ಸರಿಯಿಲ್ಲ ಎಂದು ವರನ ಕಡೆಯವರಿಗೆ ಕಿವಿ ಚುಚ್ಚಿದರು.

ಇದಲ್ಲದೆ, ರಾತ್ರಿ 10 ಗಂಟೆ ವೇಳೆಗೆ ಮಾಡಿದ ಅಡುಗೆ ಖಾಲಿಯಾದ ಹಿನ್ನೆಲೆಯಲ್ಲಿ ವರನ ಕಡೆಯವರ ಕೋಪ ನೆತ್ತಿಗೇರಿತ್ತು. ಏಕಾಏಕಿ ವರ-ವಧು ಸಂಬಂಧಿಕರು ಪರಸ್ಪರ ವಾಗ್ವಾದಕ್ಕಿಳಿದರು. ಇದು ವಿಕೋಪಕ್ಕೆ ತಿರುಗಿ ವರ ಆರತಕ್ಷತೆ ಮಧ್ಯೆಯೇ ವೇದಿಕೆಯಿಂದ ಇಳಿದು ಪೋಷಕರೊಂದಿಗೆ ಕಲ್ಯಾಣ ಮಂಟಪದಿಂದ ಕಾಲ್ಕಿತ್ತಿದ್ದಾನೆ. ಇದರ ನಡುವೆ ಕೆಲ ಹಿರಿಯರು ರಾಜೀ ಪಂಚಾಯ್ತಿಗೆ ಮುಂದಾದರಾದರೂ ಅದು ಪ್ರಯೋಜನವಾಗಲಿಲ್ಲ.   ಆದರೂ ಇಂದು ಬೆಳಿಗ್ಗೆಯೂ ಕೂಡ ವರನ ಕಡೆಯವರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಲಾಯಿತು. ಅಷ್ಟರಲ್ಲಿ ವಧುವಿನ ಕಡೆಯವರು ಕಲ್ಯಾಣ ಮಂಟಪದಿಂದಲೇ ಹೊರಟುಹೋಗಿದ್ದರು. ಇದರಿಂದ ಮದುವೆ ನಿಂತು ಹೋಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin