ಊರ್ವಶಿಗೆ ಕರಣ್ ಜೋಹರ್ ಸಿನಿಮಾದಲ್ಲಿ ನಟಿಸುವಾಸೆಯಂತೆ

Urvasi

ಊರ್ವಶಿ ರೌಟೆಲಾ-ರೂಪದರ್ಶಿ ಮತ್ತು ಸಿನಿಮಾ ನಟಿಯಾಗಿ ಹಾಲಿವುಡ್‍ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾಳೆ. ರೂಪ, ಆಕರ್ಷಕ ಮೈಮಾಟ ಮತ್ತು ಪ್ರತಿಭೆ-ಈ ಮೂರು ಗುಣಗಳ ತ್ರಿವೇಣಿ ಸಂಗಮದಂತಿರುವ ಊರ್ವಶಿಗೆ ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕೆಂಬುದು ಬಹುದಿನದ ಕನಸು.  ಕರಣ್ ಜೋಹರ್ ಅದ್ಭುತ ನಿರ್ದೇಶಕರು. ಅವರ ಚಿತ್ರದಲ್ಲಿ ನಟಿಸಬೇಕೆಂಬುದು ನನ್ನ ಬಹುದಿನ ಕನಸಾಗಿದೆ ಎಂದು ಊರ್ವಶಿ ಹೇಳಿಕೊಂಡಿದ್ದಾಳೆ. ಆಯೆ ದಿಲ್ ಹೇ ಮುಷ್ಕಿಲ್ ಸಿನಿಮಾವನ್ನು ನಾವು ನೋಡಿದೆ. ಇದು ಒಳ್ಳೆಯ ಸಿನಿಮಾ, ಸಮಕಾಲೀನ ಚಿತ್ರ. ರಣಬೀರ್ ಕಪೂರ್ ಉತ್ತಮವಾಗಿ ನಟಿಸಿದ್ದಾರೆ. ಅನುಷ್ಕಾ ಶರ್ಮ ಪ್ರತಿಭಾವಂತ ನಟಿ. ಐಶ್ವರ್ಯ ರೈ ಬಚ್ಚನ್ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ ಅವರದು ಸ್ಫೂರ್ತಿಯ ಪಾತ್ರ ಎಂಬುದು ಊರ್ವಶಿಯ ಊವಾಚ.

ಎಡಿಎಚ್‍ಎಂ ಜೊತೆ ತೆರೆ ಮೇಲೆ ಪೈಪೋಟಿಗೆ ಇಳಿದಿರುವ ಅಜಯ್  ದೇವಗನ್‍ರ ಶಿವಾಯ್ ಸಿನಿಮಾದ ಬಗ್ಗೆ ಕೇಳಿದ್ದಕ್ಕೆ. ನಾನು ಆ ಚಿತ್ರ ನೋಡಿಲ್ಲ ಎಂದಿದ್ದಾಳೆ. ಊರ್ವಶಿ 2011ರಲ್ಲಿ ಮಿಸ್ ಏಷ್ಯನ್ ಸೂಪರ್ ಮಾಡೆಲ್ ಪ್ರಶಸ್ತಿ, 2011ರ ಮಿಸ್ ಟೂರಿಸಂ ಕ್ವೀನ್ ಗೌರವ, ಮಿಸ್ ದಿವಾ-2015 ಪ್ರಶಸ್ತಿ ಗಳಿಸಿದ್ದಾಳೆ. ಅಲ್ಲದೇ ಅದೇ ವರ್ಷ ಭುವನ ಸುಂದರಿ ಸ್ಪರ್ಧೆ ಭಾರತವನ್ನು ಪ್ರತಿನಿಧಿಸಿದ್ದಳು. ಹಲವಾರು ಹಿಂದಿ ಸಿನಿಮಾಗಳು ಮತ್ತು ಮ್ಯೂಸಿಕ್ ವೀಡಿಯೋಗಳಲ್ಲೂ ಕಾಣಿಸಿಕೊಂಡಿರುವ ಊರ್ವಶಿ ಭರವಸೆಯ ತಾರೆಯಾಗಿ ಹೊರಹೊಮ್ಮಿದ್ದಾಳೆ.

► Follow us on –  Facebook / Twitter  / Google+

Sri Raghav

Admin