ಋತುಸ್ರಾವಕ್ಕೊಳಗಾದ ಯುವತಿ ಪತ್ತೆಗೆ ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್ ನಡೆಸಿದ ವಾರ್ಡನ್..!

Spread the love

Girls--01

ಮುಜಫರ್‍ನಗರ್, ಮಾ.31-ನೆಲದ ಮೇಲೆ ರಕ್ತದ ಕಲೆಗಳು ಕಂಡು ಬಂದಿದ್ದರಿಂದ ಕುಪಿತಗೊಂಡ ಹಾಸ್ಟೆಲ್ ವಾರ್ಡನ್ ಋತುಸ್ರಾವಕ್ಕೆ ಒಳಗಾದ ಯುವತಿಯನ್ನು ಪತ್ತೆ ಮಾಡಲು ವಿದ್ಯಾರ್ಥಿನಿಯರನ್ನು ಬೆತ್ತಲೆ ಪರೇಡ್ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮಜುಫರ್‍ನಗರ್‍ದಲ್ಲಿ ನಡೆದಿದೆ. ವಾರ್ಡನ್‍ನ ಈ ನೀಚ ಕೆಲಸದಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಜಫರ್‍ನಗರದ ಮಹಿಳಾ ಹಾಸ್ಟೆಲ್‍ವೊಂದರಲ್ಲಿ ಈ ಘಟನೆ ನಡೆದಿದೆ. ನೆಲದ ಮೇಲೆ ರಕ್ತದ ಕಲೆಗಳು ಗೋಚರಿಸಿದ್ದರಿಂದ ಅಶುಚಿತ್ವ ಋತುಚಕ್ರ ಎಂಬ ಕಾರಣಕ್ಕಾಗಿ ವಾರ್ಡನ್ ವಿದ್ಯಾರ್ಥಿನಿಯರನ್ನು ಈ ಬಗ್ಗೆ ವಿಚಾರಿಸಿದರು. ಆದರೆ ಯಾರೂ ಸ್ಪಷ್ಟ ಉತ್ತರ ನೀಡದ ಕಾರಣ ಕುಪಿತಗೊಂಡ ವಾರ್ಡನ್ ಯುವತಿಯರ ಬೆತ್ತಲೆ ಪರೇಡ್ ನಡೆಸಿದರು. ಈ ಘಟನೆಯಿಂದ ಅಕ್ರೋಶಗೊಂಡ 70 ವಿದ್ಯಾರ್ಥಿನಿಯರು ಧರಣಿ ನಡೆಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು. ಈ ಸಂಬಂಧ ತನಿಖೆ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin