ಎಂಇಎಸ್‍ಗೆ ನೋಟಿಸ್ ನೀಡಿದ ಬೆಳಗಾವಿ ಪೊಲಿಸರು

Belagavi--Tatnaprasad -Pawar

ಬೆಳಗಾವಿ,ನ.7- ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಆಚರಿಸಿ ಪುಂಡಾಟಿಕೆ ಮೆರೆದಿದ್ದ ನಾಡದ್ರೋಹಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ಗೆ ಬೆಳಗಾವಿ ಪೊಲಿಸರು ನೋಟಿಸ್ ನೀಡಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಎಸಗಿರುವ ಕೃತ್ಯಗಳ ಸಂಬಂಧ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಂಇಎಸ್‍ಗೆ ನೋಟಿಸ್ ಜಾರಿಯಾಗಿದೆ.ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಪೊಲಿಸರು ಷರತ್ತುಬದ್ಧ ಅನುತಿಯನ್ನು ನೀಡಿದ್ದರು. ಆ ದಿನ ಎಂಇಎಸ್ ಪುಂಡರು ಪುಂಡಾಟಿಕೆಯನ್ನು ನಡೆಸಿದ್ದರು. ನವೆಂಬರ್ 1 ರಂದು ಕನ್ನಡ ಧ್ವಜವನ್ನು ಹರಿದು ಹಾಕಿ ನಾಡದ್ರೋಹ ಎಸಗಿದ್ದರು.

ಇದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಪೊಲಿಸರು ಕ್ರಮಕ್ಕೆ ಮುಂದಾದಾಗ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದರು. ಅಲ್ಲದೇ ಮೆರವಣಿಗೆಯಲ್ಲಿ ಎಂಇಎಸ್ ಗುಂಪಿನ ರತ್ನಪ್ರಸಾದ್ ಪವಾರ್ ಬಂದೂಕು ಹಿಡಿದು ಓಡಾಡಿದ್ದ. ಜೊತೆಗೆ ನಿಗಧಿತ ಸಮಯ ಮೀರಿ ಬೈಕ್‍ನಲ್ಲಿ ಮೆರವಣಿಗೆ ನಡಸಿದ್ದರು.ಪೊಲೀಸರು ವಿಧಿಸಿದ್ದ ಷರತ್ತುಗಳನ್ನೆಲ್ಲಾ ಗಾಳಿಗೆ ತೂರಿ ಎಂಇಎಸ್ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಆಚರಿಸಿತ್ತು. ಈ ಹಿನ್ನಲೆಯಲ್ಲಿ ಮೂರು ದಿನಗಳ ಒಳಗಾಗಿ ವಿಚಾರಣೆಗಾಗಿ ಹಾಜರಾಗುವಂತೆ ಬೆಳಗಾವಿ ಪೊಲಿಸ್ ಆಯುಕ್ತ ಕೃಷ್ಣಭಟ್ ನೋಟಿಸ್ ನೀಡಿದ್ದಾರೆ.

► Follow us on –  Facebook / Twitter  / Google+

Sri Raghav

Admin