ಎಂದೆಂದಿಗೂ ಧೋನಿಯೇ ನನ್ನ ಕ್ಯಾಪ್ಟನ್ : ಕೊಹ್ಲಿ ಎಮೋಷನಲ್ ಟ್ವಿಟ್

Kohli
ನವದೆಹಲಿ, ನ.6- ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಅವರು ನಾಯಕತ್ವವನ್ನು ತ್ಯಜಿಸಿದ್ದರೂ ಕೂಡ ಎಂದೆಂದಿಗೂ ಅವರೇ ನನ್ನ ನಾಯಕ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಭಾವುಕರಾಗಿ ಟ್ವೀಟರ್‍ನಲ್ಲಿ ಟ್ವಿಟ್ಟಿಸಿದ್ದಾರೆ.  2008ರಲ್ಲಿ ನಾನು ಮೊದಲ ಪಂದ್ಯವು ಆಡಲು ಮೈದಾನಕ್ಕಿಳಿದ ದಿನದಿಂದಲೂ ನನ್ನಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ಪ್ರತಿಯೊಂದು ಹಂತದಲ್ಲೂ ನಾನು ಉನ್ನತ ಮಟ್ಟಕ್ಕೆ ಏರಲು ಧೋನಿಯ ಸಲಹೆಗಳು ನೆರವಾಗಿದೆ ಎಂದು ಹೇಳಿದ್ದಾರೆ.  ನನ್ನಂತೆ ಹಲವಾರು ಯುವ ಹಾಗೂ ಪ್ರತಿಭಾವಂತ ಆಟಗಾರರನ್ನು ಟೀಂ ಇಂಡಿಯಾದಲ್ಲಿ ಭದ್ರ ನೆಲೆ ಕಂಡುಕೊಳ್ಳಲು ತಮ್ಮ ನಾಯಕತ್ವದಲ್ಲಿ ಅವಕಾಶ ಮಾಡಿಕೊಟ್ಟಿರುವ ಧೋನಿ ವಿಶ್ವದ ಕಂಡ ಶ್ರೇಷ್ಠ ನಾಯಕನಾಗಿಯೂ ಹೊರಹೊಮ್ಮುತ್ತಾರೆ.

ಇನ್ನು ಮುಂದೆಯೂ ನಾನು ಧೋನಿಯ ಹೆಜ್ಜೆಯಾಗಿ ಸಾಗುವ ಮೂಲಕ ಭಾರತ ತಂಡದಲ್ಲಿ ಯುವ ಆಟಗಾರರನ್ನು ಸದೃಢಗೊಳಿಸುವತ್ತ ದೃಷ್ಟಿ ಹರಿಸುತ್ತಾರೆ ಎಂದೂ ಕೊಹ್ಲಿ ಟ್ವೀಟ್ಟಿಸಿದ್ದಾರೆ.  ಕೊಹ್ಲಿಯೇ ಅಲ್ಲದೇ ವಿಶ್ವ ಕಂಡ ಶ್ರೇಷ್ಠ ನಾಯಕರಾದ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್, ಇಂಗ್ಲೆಂಡ್‍ನ ಮೈಕಲ್ ವಾನ್, ಪಾಕಿಸ್ತಾನದ ಶಾಹಿದಿ ಆಫ್ರಿದಿ ಹಾಗೂ ಜಾಹೀರ್ ಅಬ್ಬಸ್ ಅವರು ಕೂಡ ಧೋನಿಯ ನಾಯಕತ್ವದಲ್ಲಿ ಭಾರತ ಉನ್ನತ ಶಿಖರಕ್ಕೆ ಏರಿದೆ ಎಂದು ಬಿಂಬಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Sri Raghav

Admin