ಎಚ್‍ಡಿಕೆ ವಿರುದ್ಧ ತೊಡೆ ತಟ್ಟಿದ ಬಾಲಕೃಷ್ಣ

Spread the love

Balakrishna-HDK-JDS

ಬೆಳಗಾವಿ, ನ.24- ಜಗಳ ಮಾಡಿದ್ರೆ ಜಗತ್‍ಜಟ್ಟಿಗಳ ಜತೆ ಜಗಳ ಮಾಡಬೇಕು. ಆಗ ದೊಡ್ಡ ನಾಯಕನಾಗಲು ಸಾಧ್ಯ ಎಂಬುದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಅಭಿಪ್ರಾಯ. ನನ್ನ ಕ್ಷೇತ್ರದಲ್ಲಿ ಕುಮಾರಸ್ವಾಮಿ ಬಂದು ನಿಂತರೂ ಅವರ ವಿರುದ್ಧ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪ್ ಕಿ ಬಾರ್ ಕುಮಾರಸ್ವಾಮಿ ಸರ್ಕಾರ್ ಎಂಬ ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹಿನ್ನೆಲೆಯಲ್ಲಿ ಈಗ ಯಾವ ಬಾರು ಗೀರು ಇಲ್ಲ. ನನ್ನ ಕ್ಷೇತ್ರಕ್ಕೆ ಬಂದು ಎಚ್‍ಡಿಕೆ ಸ್ಪರ್ಧೆ ಮಾಡುವುದಾದರೂ ಸ್ವಾಗತಿಸುತ್ತೇನೆ. ನಾನು ಅವರ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಜಗಳ ಮಾಡಿದರೂ ಜಗತ್‍ಜಟ್ಟಿಗಳ ಜತೆ ಗುದ್ದಾಡಬೇಕು. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದರೆ ರಾಜ್ಯಮಟ್ಟದ ನಾಯಕನಾಗುತ್ತೇನೆ ಎಂದು ಹೇಳಿದರು. ನನ್ನ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿಯವರು ಬೇಕಾದ್ರೂ ಬಂದು ಸ್ಪರ್ಧಿಸಲಿ. ನಾನು ಸ್ವಾಗತಿಸುತ್ತೇನೆ ಎಂದು ಬಾಲಕೃಷ್ಣ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin