ಎನ್‍ಎಸ್‍ಸಿಎನ್ ಬಂಡುಕೋರರ ಹತ್ಯೆ, ಸೇನಾಧಿಕಾರಿ ಹುತಾತ್ಮ

NSCn--01

ಕೋಹಿಮಾ, ಜೂ. 7- ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ನಾಗಾಲ್ಯಾಂಡ್ ರಾಷ್ಟ್ರೀಯ ಸೋಷಿಯಲಿಸ್ಟ್ ಕೌನ್ಸಿಲ್(ಎನ್‍ಎಸ್‍ಸಿಎನ್-ಕೆ)ನ ಬಂಡುಕೋರರ ಜೊಲೆ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಅಸ್ಸಾಂ ರೈಫಲ್ಸ್‍ನ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದು ಇತರ ಮೂವರು ಜವಾನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಇದೇ ವೇಳೆ ಈ ಗುಂಡಿನ ಚಕಮಕಿಯಲ್ಲಿ ಎನ್‍ಎಸ್‍ಸಿಎನ್-ಕೆಗೆ ಸೇರಿದ ಮೂವರು ಬಂಡುಕೋರರೂ ಗುಂಡಿಗೆ ಬಲಿಯಾಗಿದ್ದಾರೆ ಎಂದು ಅಸ್ಸಾಂ ರೈಫಲ್ಸ್‍ನ ವಕ್ತಾರರೊಬ್ಬರು ತಿಳಿಸಿದ್ದಾರೆ.ಮೋನ್ ಜಿಲ್ಲೆಯ ಅರಣ್ಯ ಭಾಗದ ಲಪ್ಪಾದಲ್ಲಿ ಎನ್‍ಎಸ್‍ಸಿಎನ್ ಉಗ್ರರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಸ್ಸಾಂ ರೈಫಲ್ಸ್ ಪಡೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಗಿಳಿದಾಗ ಈ ಕಾಳಗ ನಡೆಯಿತು. ರಾತ್ರಿ ಸುಮಾರು ನಾಲ್ಕಾರು ತಾಸುಗಳ ಕಾಲ ಈ ಚಕಮಕಿ ನಡೆಯಿತು. ನಂತರ ಪ್ರದೇಶದಲ್ಲಿ ಶೋಧಿಸಿದಾಗ ಒಬ್ಬರು ಸೇನಾಧಿಕಾರಿ ಮತ್ತು ಮೂವರು ಉಗ್ರರ ಮೃತ ದೇಹಗಳು ಸಿಕ್ಕಿದವು ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin