ಎರಡು ತಲೆ, ನಾಲ್ಕು ಕಣ್ಣಿನ ವಿಚಿತ್ರ ಮೇಕೆ ಮರಿ ಜನನ
ಮಳವಳ್ಳಿ, ಮೇ 22– ಪ್ರಪಂಚದಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸೂಕ್ತ ಉದಾಹರಣೆಯಾಗಿ ತಾಲ್ಲೂಕಿನ ನಂಜೇಗೌಡನ ದೊಡ್ಡಿಯಲ್ಲಿ ಎರಡು ತಲೆ, ನಾಲ್ಕು ಕಣ್ಣಿನ ಮೇಕೆ ಮರಿ ಜನನವಾಗಿ ಅಚ್ಚರಿ ಮೂಡಿಸಿದೆ. ನಂಜೇಗೌಡನ ದೊಡ್ಡಿ ಗ್ರಾಮದ ನಿವಾಸಿ ಪೊಲೀಸ್ ನಂಜಪ್ಪ ಎಂಬುವರ ಮನೆಯಲ್ಲಿ ರಾತ್ರಿ ಮೇಕೆಯೊಂದು ಮರಿ ಹಾಕಿತ್ತು. ಆ ಮೇಕೆಗೆ ಎರಡು ತಲೆ, ನಾಲ್ಕು ಕಣ್ಣುಗಳಿವೆ.
ಇದನ್ನು ಕಂಡು ಅಚ್ಚರಿಗೊಳಗಾದ ನಂಜಪ್ಪ ಅವರು ಗ್ರಾಮಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಮೇಕೆ ಮರಿ ಆರೋಗ್ಯವಾಗಿದೆ. ಇದನ್ನು ನೋಡಲು ಇಡೀ ಗ್ರಾಮವೇ ಅವರ ಮನೆ ಮುಂದೆ ಜಮಾಯಿಸಿದೆ. ಇದೊಂದು ವೈದ್ಯ ಲೋಕಕ್ಕೆ ಸವಾಲಾಗಿದ್ದು, ಪ್ರಕೃತಿಯ ವೈಪರೀತ್ಯದಿಂದ ಇಂತಹ ಅಪರೂಪ ಘಟನೆಗಳು ನಡೆಯುತ್ತವೆ ಎಂದು ಗ್ರಾಮದ ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments