ಎರಡು ಮನೆಗಳ ನಡುವೆ ಇದ್ದ ಖಾಲಿ ಜಾಗದ ಮಾಲೀಕತ್ವದ ವಿವಾದ ಕೊಲೆಯಲ್ಲಿ ಅಂತ್ಯ

murder-6

ಬೆಳ್ತಂಗಡಿ, ಡಿ.1- ಎರಡು ಮನೆಗಳ ನಡುವೆ ಇದ್ದ ಖಾಲಿ ಜಾಗದ ಮಾಲೀಕತ್ವದ ವಿವಾದ ತಾರಕಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉಜಿರೆಯಲ್ಲಿ ನಡೆದಿದೆ.ಅಣ್ಣು (35) ಕೊಲೆಯಾದ ವ್ಯಕ್ತಿಯಾಗಿದ್ದು, ಈ ಸಂಬಂಧ ನೆರೆ ಮನೆಯ ಗಿರೀಶ್ ಮತ್ತು ವೆಂಕಟೇಶ್ ಎಂಬುವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ಅಕ್ಕ ಪಕ್ಕದ ಮನೆಯವರ ನಡುವೆ ಸುಮಾರು ಅರ್ಧ ಎಕರೆ ಜಾಗದ ಬಗ್ಗೆ ವಿವಾದವಿತ್ತು. ಆಗಾಗ ಜಗಳವೂ ನಡೆದಿತ್ತು. ಆದರೆ ನಿನ್ನೆ ರಾತ್ರಿ ಉಜಿರೆಯ ಎಸ್.ಆರ್.ಬಾರ್ ಸಮೀಪ ನಡೆದು ಬರುತ್ತಿದ್ದ ಅಣ್ಣುನನ್ನು ಬಂಧಿತ ಆರೋಪಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin