ಎಲ್ಐಸಿ ವಜ್ರ ಮಹೋತ್ಸವದ ಪ್ರಯುಕ್ತ ಹಸಿರು ವನ ನಿರ್ಮಾಣ
ಕಡೂರು, ಆ.20- ಭಾರತೀಯ ಜೀವ ವಿಮಾ ನಿಗಮದ ವಜ್ರ ಮಹೋತ್ಸವದ ಅಂಗವಾಗಿ ಎಲ್ಲಾ ಶಾಖೆಗಳಲ್ಲೂ ಹಸಿರು ವನ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ರಾಜ್ಯ ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಮೊಹಮದ್ ಅಜೀಜ್ಹುದ್ದೀನ್ ತಿಳಿಸಿದರು.ಕಡೂರು ಶಾಖೆಗೆ ಭೇಟಿ ನೀಡಿ, ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಜ್ರ ಮಹೋತ್ಸವ ಆಚರಣೆಯನ್ನು ಮುಂದಿನ ತಿಂಗಳು ಆಚರಿಸಲಿದ್ದು. ಅದರಂತೆ ಪ್ರತಿ ಶಾಖೆಯಲ್ಲೂ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.ಉಡುಪಿಯ ಸೀನಿಯರ್ ವಿಭಾಗೀಯ ವ್ಯವಸ್ಥಾಪಕ ವಿಶ್ವೇಶ್ವರ ರಾಮ್, ಆರ್.ವಿ. ಮುಧೋಳ್, ಜೆ.ಎನ್.ಜೆ.ಎನ್.ಶಶಿಧರ್, ಕಡೂರು ಶಾಖೆಯ ವ್ಯವಸ್ಥಾಪಕ ಎನ್, ಮಂಜುನಾಥ್, ಅಭಿವೃದ್ಧಿ ಅಧಿಕಾರಿ ಉದಯಚಂದ್ರ, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.