ಎಲ್‍ಒಸಿ ಬಳಿ ಒಳ ನುಸುಳಲೆತ್ನಿಸಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Firing--Border

ಶ್ರೀನಗರ, ಸೆ.16-ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಒಳನುಸುಳುವಿಕೆಗೆ ಯತ್ನಿಸಿದ ಭಯೋತ್ಪಾದಕರ ಮತ್ತೊಂದು ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ಧಾರೆ.  ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಒಳನುಸುಳಲು ಉಗ್ರರು ನಡೆಸಿದ ಯತ್ನವನ್ನು ನಮ್ಮ ಯೋಧರು ವಿಫಲಗೊಳಿಸಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಲು ಭಯೋತ್ಪಾದಕರು ಅಲ್ಲಿ ರಹಸ್ಯವಾಗಿ ಸಂಚರಿಸುತ್ತಿದ್ದ ಸಂಗತಿಯನ್ನು ಯೋಧರು ಗಮನಿಸಿದರು. ಅವರಿಗೆ ಎಚ್ಚರಿಕೆ ನೀಡಿದಾಗ ಉಗ್ರರು ಗುಂಡು ಹಾರಿಸಿದರು. ಆಗ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು ಎಂದು ಅವರು ಹೇಳಿದ್ದಾರೆ.
ಹತರಾದ ಉಗ್ರರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Sri Raghav

Admin