ಎಸ್ಸಿ-ಎಸ್ಟಿ ವಸತಿ ರಹಿತರಿಗೆ ಆದ್ಯತೆ

KOLEGALA

ಕೊಳ್ಳೇಗಾಲ, ಸೆ.19- ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪಣ ತೊಟ್ಟಿದ್ದು ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿ ರಹಿತ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಸ್.ಜಯಣ್ಣ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ 2015-16ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೊಜನೆ ಮತ್ತು ನಗರ ವಾಜಪೇಯಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಕೇಂದ್ರದ ಸಹಯೋಗದೊಡನೆ ಪ್ರಸಕ್ತ ಸಾಲಿನಲ್ಲಿ ಎಸ್‍ಸಿ ಹಾಗೂ ಎಸ್‍ಟಿ ವರ್ಗಕ್ಕೆ 398 ವಸತಿ ಯೋಜನೆ ನಿರ್ಮಾಣ ಗುರಿ ಹೊಂದಿದೆ, ನಗರಸಭಾ ವ್ಯಾಪ್ತಿಯಲ್ಲಿ ಎಷ್ಟು ಮಂದಿ ವಸತಿ ರಹಿತರಿದ್ದಾರೆ ಎಂಬ ಕುರಿತು ಸರ್ವೇ ಕಾರ್ಯ ಮಾಡಿ ಆಶ್ರಯ ಸಮಿತಿಯಲ್ಲಿಡಲಾಗುವುದು. ಅರ್ಹ ಫಲಾನುಭವಿಗಳು ನಗರಸಭೆಗೆ ಅಗತ್ಯ ದಾಖಲೆಗಳನ್ನು ನೀಡಿ ಈ ಯೋಜನೆಯ ಸದುಪಯೋಗವನ್ನು ಪಡೆಯಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಬಸ್ತೀಪುರ ಶಾಂತರಾಜು ಮನೆಗಳ ನಿರ್ಮಾಣಕ್ಕೆ ಸಾರ್ವಜನಿಕರು ಮರಳಿನ ತೀವ್ರ ಅಭಾವದಿಂದ ಪರದಾಡುತ್ತಿದ್ದು ಅಗತ್ಯ ಮರಳು ಪೂರೈಸಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆಸಿದ ಶಾಸಕ ಜಯಣ್ಣ ಮುಂದಿನ ತಿಂಗಳು ಮೊದಲನೆ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಎಲ್ಲರಿಗೂ ಸರ್ಕಾರಿ ದರದಲ್ಲಿ ಮರಳು ದೊರಕಲಿದೆ ಎಂದು ಹೇಳಿದರು.ನಗರಸಭಾಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಾಂತರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಮಾಜಿ ಅಧ್ಯಕ್ಷೆ ಮಹದೇವಿ, ಸದಸ್ಯರಾದ ಸುರೇಶ್, ರಾಘವೇಂದ್ರ, ಬಸ್ತೀಪುರ ಶಾಂತು, ರಮೇಶ್, ಸುಂದ್ರಮ್ಮ ಜಗದೀಶ್, ಆಯುಕ್ತ ಲಿಂಗರಾಜು ಮತ್ತಿತರರು ಹಾಜರಿದ್ದರು.

 

 

► Follow us on –  Facebook / Twitter  / Google+

 

Sri Raghav

Admin