ಎಸ್‍ಸಿ-ಎಸ್‍ಟಿಯವರಿಗೆ ಮನೆ ಕಟ್ಟಿಸಿಕೊಡಲು 200 ಕೋಟಿ ಮೀಸಲು

Spread the love

H.Anjaneya-Session

ಬೆಂಗಳೂರು, ಮಾ. 23– ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡದವರಿಗೆ ಮನೆ ಕಟ್ಟಿಸಿಕೊಡುವ ಸಲುವಾಗಿಯೇ 200 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಸಮುದಾಯದ ನಿರ್ವಸತಿಗರು ಅರ್ಜಿ ಸಲ್ಲಿಸಿದರೆ ತಕ್ಷಣವೇ ಮನೆ ಒದಗಿಸಲು ಕ್ರಮಕೈಗೊಳ್ಳ ಲಾಗುವುದು ಎಂದು ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.  ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹಂಪನಗೌಡ ಬದರ್ಲಿ ಅವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯು ತ್ವರಿತವಾಗಿ ನಡೆಯುತ್ತಿಲ್ಲ. ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಎಚ್.ಆಂಜನೇಯ, ಪರಿಶಿಷ್ಟರು ಎಲ್ಲೆಲ್ಲಿ ಅರ್ಜಿ ಸಲ್ಲಿಸುತ್ತಾರೋ ಅಲ್ಲೇ ಮನೆಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಈ ವಿಷಯವಾಗಿ ರಾಜ್ಯಸರ್ಕಾರ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. ಯಾರೂ ಮುಲಾಜು ಇಟ್ಟುಕೊಳ್ಳಬೇಕಿಲ್ಲ. ಹಣದ ಕೊರತೆಯೂ ಇಲ್ಲ ಎಂದರು.
ಒಂದು ವೇಳೆ ನಿವೇಶನ ಲಭ್ಯತೆ ಇಲ್ಲದೆ ಭೂಮಿ ಖರೀದಿಸುವ ಅನಿವಾರ್ಯತೆ ಎದುರಾದರೆ ಸರ್ಕಾರ ಅದಕ್ಕೂ ಸಿದ್ಧವಿದೆ. ಮಾರ್ಗಸೂಚಿ ಬೆಲೆಗಿಂತಲೂ ನಾಲ್ಕು ಪಟ್ಟು ಹೆಚ್ಚು ಬೆಲೆ ನೀಡಿ ಭೂಮಿ ಖರೀದಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಭೂಮಿ ಖರೀದಿಸಲು ಕಷ್ಟವಾಗಬಹುದು. ಸರ್ಕಾರದ 10 ಲಕ್ಷ ದರನಿಗದಿಪಡಿಸಿದರೆ, ಮಾರುಕಟ್ಟೆಯಲ್ಲಿ ಒಂದು ಕೋಟಿ ಮೌಲ್ಯವಿದೆ.

ಹೀಗಾಗಿ ಜನರ 10 ಲಕ್ಷ ಭೂಮಿ ಎಂದು ನೋಂದಣಿ ಮಾಡಿಸಿ ಉಳಿದ ಹಣವನ್ನು ನುಂಗಿ ಹಾಕುತ್ತಿರುವ ಸತ್ಯ ಎಲ್ಲರಿಗೂ ಗೊತ್ತಿದೆ. ರಾಜ್ಯದ ಬೇರೆ ಕಡೆ ಈ ರೀತಿ ಭೂಮಿ ಖರೀದಿ ಮಾಡಲು ಸಮಸ್ಯೆಯಾಗಿಲ್ಲ. ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಂಜನೇಯ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin