ಏಕದಿನ, ಟಿ-20 ನಾಯಕನಾಗಿ ವಿರಾಟ್‍ ಕೊಹ್ಲಿಗೆ ಪಟ್ಟಾಭಿಷೇಕ

Spread the love

Virat-Kohli

ಮುಂಬೈ, ಜ.6- ಬಹಳ ನಾಟಕೀಯ ಬೆಳವಣಿಗೆ ನಂತರ ಕೊನೆಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗ ಟ್ವಿಂಟಿ-20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು ಟೆಸ್ಟ್ ನಾಯಕ ವಿರಾಟ್ ಕೊಹ್ಲಿಗೆ ನಾಯಕನಾಗಿ ಪಟ್ಟಾಭಿಷೇಕವನ್ನು ಮಾಡಲಾಯಿತು.  ಇತ್ತೀಚೆಗೆ ಮಹೇಂದ್ರ ಸಿಂಗ್ ಧೋನಿ ಸೀಮಿತ ಓವರ್‍ಗಳ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿಯೇ ಮುಂದಿನ ನಾಯಕನೆಂದು ಬಿಂಬಿಸಲಾಗಿತ್ತು ಅದನ್ನು ಇಂದು ಆಯ್ಕೆಗಾರರ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಅವರು ಹೊರಡಿಸಿದ್ದಾರೆ. ಮೂರು ಏಕದಿನ ಹಾಗೂ 3 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳು ಜನವರಿ 15 ರಿಂದ ಆರಂಭಗೊಳ್ಳಲಿದೆ.

ನಾಯಕನ ಜವಾಬ್ದಾರಿಯನ್ನು ತ್ಯಜಿಸಿರುವ ಮಹೇಂದ್ರ ಸಿಂಗ್ ಧೋನಿ ಅವರನ್ನು ವಿಕೆಟ್ ಕೀಪರ್ ಕಂ ಬ್ಯಾಟ್ಸ್‍ಮನ್ ರೂಪದಲ್ಲಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದು ಕೆ.ಎಲ್.ರಾಹುಲ್‍ರನ್ನು ಮತ್ತೊಬ್ಬ ವಿಕೆಟ್ ಕೀಪರ್ ರೂಪದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಯುವರಾಜ್‍ಸಿಂಗ್ ಮಣೆ:

ಅನುಭವಿ ಆಟಗಾರ ಯುವರಾಜ್‍ಸಿಂಗ್‍ಗೆ ಆಯ್ಕೆ ಮಂಡಳಿ ಮಣೆ ಹಾಕಿದ್ದು 15 ಆಟಗಾರರ ತಂಡದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ.

ಕನ್ನಡಿಗರಿಗೆ ಲಕ್:

ಇಂದು ಆಯ್ಕೆ ಮಾಡಿದ ತಂಡದಲ್ಲಿ ಕನ್ನಡಿಗರಿಗೆ ಲಕ್ ಕುದುರಿದಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 199 ರನ್‍ಗಳನ್ನು ಗಳಿಸಿದ್ದ ಕೆ.ಎಲ್.ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಭರವಸೆ ಆಟಗಾರ ಮನೀಷ್ ಪಾಂಡೆ ಅವರಿಗೆ ಸ್ಥಾನ ಕಲ್ಪಿಸಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ ಕರುಣ್‍ನಾಯರ್‍ರನ್ನು ಕೈ ಬಿಟ್ಟಿರುವುದು ತುಸು ನಿರಾಸೆ ಉಂಟಾಗಿದೆ.

ಹಿಂದುರುಗಿದ ಶಿಖರ್ ಧವನ್, ರಹಾನೆ:  ಇಂಗ್ಲೆಂಡ್ ಟೆಸ್ಟ್‍ನ ವೇಳೆ ಗಾಯಗೊಂಡಿದ್ದ ಉಪನಾಯಕ ಅಜೆಂಕ್ಯಾ ರಹಾನೆ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ , ಹಾರ್ದಿಕ್ ಪಾಂಡ್ಯಾ ಅವರು ತಂಡವನ್ನು ಕೂಡಿಕೊಂಡಿರುವುದರಿಂದ ಬ್ಯಾಟಿಂಗ್ ಶಕ್ತಿ ಹೆಚ್ಚಿದಂತಿದೆ.

ಮೊಹಮ್ಮದ್ ಶಮಿ, ರೋಹಿತ್ ಶರ್ಮಾಗೆ ಕೊಕ್:  ಏಕದಿನ ಹಾಗೂ ಟ್ವೆಂಟಿ-20ಸ್ಪೆಷಾಲಿಸ್ಟ್ ಎಂದೇ ಬಿಂಬಿಸಿಕೊಂಡಿರುವ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ಇಂಗ್ಲೆಂಡ್ ಟೂರ್ನಿಯಿಂದ ಕೈ ಬಿಡಲಾಗಿದೆ.

ರಿಷಭ್ ಪಂಥ್‍ಗೆ ಲಕ್: ಪ್ರಸಕ್ತ ರಣಜಿ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಉತ್ತರಖಂಡ್‍ದ ಯುವ ಆಟಗಾರ ರಿಷಭ್ ಪಂಥ್ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಎಡವಿದರೂ ಟ್ವೆಂಟಿ-20ಯಲ್ಲಿ ವಿಕೆಟ್ ಕೀಪರ್ ರೂಪದಲ್ಲಿ ಲಕ್ ಕುದುರಿಸಿಕೊಂಡಿದ್ದಾರೆ.

ತಂಡಗಳ ವಿವರ: ಏಕದಿನ:  ವಿರಾಟ್ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್ ಧೋನಿ, ಯುವರಾಜ್‍ಸಿಂಗ್, ಕೆ.ಎಲ್.ರಾಹುಲ್, ಶಿಖರ್ ಧವನ್, ಮನೀಷ್ ಪಾಂಡೆ, ಕೇದಾರ್ ಜಾಧವ್, ಯುವರಾಜ್‍ಸಿಂಗ್, ಅಜೆಂಕ್ಯಾ ರಹಾನೆ, ಹಾರ್ದಿಕ್ ಪಾಂಡ್ಯಾ, ಆರ್.ಅಶ್ವಿನ್, ರವೀಂದ್ರಾ ಜಾಡೇಜಾ, ಅಮಿತ್‍ಮಿಶ್ರಾ , ಜಸ್‍ಪ್ರೀತ್ ಬೂಮ್ರಾ , ಭುವನೇಶ್ವರ್‍ಕುಮಾರ್, ಉಮೇಶ್ ಯಾದವ್.

ಟ್ವೆಂಟಿ-20 ತಂಡ: ವಿರಾಟ್ ಕೊಹ್ಲಿ (ನಾಯಕ), ಎಂ.ಎಸ್.ಧೋನಿ (ವಿಕೆ), ಕೆ.ಎಲ್.ರಾಹುಲ್, ಮನ್‍ದೀಪ್‍ಸಿಂಗ್, ಯುವರಾಜ್‍ಸಿಂಗ್, ಸುರೇಶ್ ರೈನಾ, ರಿಷಭ್ ಪಂಥ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯಾ, ಆರ್.ಅಶ್ವಿನ್, ರವೀಂದ್ರ ಜಾಡೇಜಾ, ಯಜುವೇಂದ್ರ ಚಹಾಲ್, ಮನೀಷ್ ಪಾಂಡೆ, ಜಸ್‍ಪ್ರೀತ್ ಬೂಮ್ರಾ , ಭುವನೇಶ್ವರ್‍ಕುಮಾರ್, ಅಶೀಶ್ ನೆಹ್ರಾ

ಪಂದ್ಯಗಳ ವಿವರ:

ಏಕದಿನ >
ಮೊದಲ ಪಂದ್ಯ: ಜ.15, ಪುಣೆ (ಹಗಲು/ರಾತ್ರಿ), ಎರಡನೆ ಪಂದ್ಯ: ಜನವರಿ 19 ಬರಬ್ಬಾತಿ ಕ್ರೀಡಾಂಗಣ, ಕಟಕ್(ಹಗಲು/ರಾತ್ರಿ), ಮೂರನೆ ಪಂದ್ಯ: ಜನವರಿ 22, ಈಡನ್ ಗಾರ್ಡನ್ , ಕೋಲ್ಕತ್ತಾ (ಹಗಲು/ರಾತ್ರಿ).
ಟ್ವೆಂಟಿ-20 >
ಮೊದಲ ಪಂದ್ಯ: ಜನವರಿ 26 , ಗ್ರೀನ್ ಪಾರ್ಕ್, ಕಾನ್ಪುರ, ಎರಡನೇ ಪಂದ್ಯ: ಜನವರಿ 29 ವಿದರ್ಭ ಕ್ರಿಕೆಟ್ ಕ್ರೀಡಾಂಗಣ, ಜಮತಾ,

ಫೆಬ್ರವರಿ 1: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin