ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ರಾಜಕೀಯ ಬೇಡ : ಮುಸ್ಲಿಂ ಮಂಡಳಿಗೆ ನಾಯ್ಡು ತರಾಟೆ

Vekaiha-Nidu

ನವದೆಹಲಿ,ಅ.14-ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡನೆಗ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಾಕೀತು ಮಾಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಕಾರಣ ಈ ವಿಷಯದಲ್ಲಿ ಪ್ರಧಾನಿ ಮೋದಿಯವರನ್ನು ಎಳೆದು ತರುವ ಅಗತ್ಯವಿಲ್ಲ. ಈ ಬಗ್ಗೆ ರಾಜಕೀಯ ಚರ್ಚೆಯಾಗಬೇಕಿದೆ. ನಿಮಗೆ ಆಸಕ್ತಿ ಇದ್ದರೆ ವೈಯಕ್ತಿಕವಾಗಿ ಆರೋಪಗಳನ್ನು ಮಾಡುವುದನ್ನು ಬಿಟ್ಟು ರಾಜಕೀಯ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸಬೇಕೆಂದು ಅವರು ಮಂಡಳಿಗೆ ತಿರುಗೇಟು ನೀಡಿದ್ದಾರೆ.  ಜನರ ಮೇಲೆ ವಿನಾಕಾರಣ ಕಾನೂನುಗಳನ್ನು ವಿಧಿಸುವ ಇರಾದೆ ಸರ್ಕಾರಕ್ಕಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು, ಇದು ಎಲ್ಲರಿಗೂ ಅನ್ವಯಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

► Follow us on –  Facebook / Twitter  / Google+

Sri Raghav

Admin