ಏಪ್ರಿಲ್ ಅಂತ್ಯದವರೆಗೆ 6ನೇ ವೇತನ ಆಯೋಗದ ಅವಧಿ ವಿಸ್ತರಣೆ

Spread the love

6th-Pay--02

ಬೆಂಗಳೂರು,ಜ.31-ರಾಜ್ಯದ 6ನೇ ವೇತನ ಆಯೋಗದ ಅವಧಿಯನ್ನು ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ವೇತನ ಆಯೋಗವು ಇಂದು ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧಿಸಿದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ.  ಇಂದು ಆಯೋಗದ ವರದಿ ಮುಕ್ತಾಯಗೊಳ್ಳಬೇಕಿತ್ತು. 6ನೇ ವೇತನ ಆಯೋಗ ವರದಿ ಸಲ್ಲಿಕೆ : ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್..! ] ಆಯೋಗವು ಸರ್ಕಾರಕ್ಕೆ 2ನೇ ಸಂಪುಟದ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ. ಅಲ್ಲದೆ 2ನೇ ವರದಿಯನ್ನು ಅಂತಿಮಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಇಲಾಖೆಗಳೊಂದಿಗೆ ವಿವಿಧ ನೌಕರರೊಂದಿಗೆ, ಸಂಘಗಳೊಂದಿಗೆ ಸಭೆ ನಡೆಸಬೇಕಾದ ಹಿನ್ನೆಲೆಯಲ್ಲಿ ಆಯೋಗದ ವರದಿಯನ್ನು ವಿಸ್ತರಿಸಲಾಗಿದೆ.

Facebook Comments

Sri Raghav

Admin