ಏಷಿಯಾನ್ ಹಾಕಿ ಚಾಂಪಿಯನ್ಸ್ ಪಟ್ಟಕ್ಕೆ ಭಾರತ- ಪಾಕಿಸ್ತಾನ ಸೆಣಸಾಟ

Ind-vs-pak

ಕುಹಾನ್‍ಟನ್ (ಮಲೇಷಿಯಾ), ಅ.30- ಏಷಿಯಾನ್ ಹಾಕಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಲು ಸಂಪ್ರದಾಯಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲಿವೆ. ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಪಿ.ಆರ್.ಶ್ರೀಜೇಶ್‍ರ ಚುರುಕಿನ ಆಟದಿಂದ ದಕ್ಷಿಣ ಕೊರಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಫೈನಲ್ ಹಂತಕ್ಕೇರಿದೆ. ಅಂತಿಮ ಕ್ಷಣದವರೆಗೂ ಕುತೂಹಲವನ್ನು ಮೂಡಿಸಿದ್ದ ಈ ಪಂದ್ಯದಲ್ಲಿ ಯಾವ ತಂಡವು ಜಯ ಸಾಧಿಸಲಿದೆ ಎಂಬು ನಿರ್ಧಾರವಾಗಲಿಲ್ಲ. ಆಟದ ಅಂತಿಮ ಕ್ಷಣದಲ್ಲಿ ಎರಡು ತಂಡವು 2-2 ರಿಂದ ಸಮಬಲ ಸಾಧಿಸಿತು.

ಆಗ ಅಂಪೈರ್‍ಗಳು ಪೆನಾಲ್ಟಿ ಶೂಟೌಟ್‍ನ ಮೊರೆ ಹೋದಾಗ ಭಾರತ ತಂಡವು 5-4 ರಿಂದ ಗೆದ್ದು ಫೈನಲ್ ಹಂತಕ್ಕೆ ತಲುಪಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮಲೇಷ್ಯಾ ವಿರುದ್ಧ 1-1 ರಿಂದ ಸಮಬಲ ಸಾಧಿಸಿದರೂ ಪೆನಾಲ್ಟಿ ಶೂಟೌಟ್‍ನಲ್ಲಿ 3-2 ಗೋಲುಗಳ ಅಂತರದಿಂದ ಫೈನಲ್ ಹಂತಕ್ಕೆ ತಲುಪಿತು. ರೌಂಡ್ ರಾಬಿನ್‍ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ 2-1ರಿಂದ ಜಯಗಳಿಸಿದ್ದು ಈಗ ಫೈನಲ್ ಪಂದ್ಯದಲ್ಲಿ ಚಾಂಪಿಯನ್ಸ್ ಮುಕುಟವನ್ನು ಅಲಂಕರಿಸಲು ಈ ಎರಡು ತಂಡಗಳು ಸೆಣಸಾಟ ನಡೆಸಲಿವೆ.

► Follow us on –  Facebook / Twitter  / Google+

Sri Raghav

Admin