ಏ.19ರಂದು ಭೂಮಿಯ ಸಮೀಪದಲ್ಲೇ ಹಾದುಹೋಗಲಿದೆ ಬೃಹತ್ ಕ್ಷುದ್ರಗ್ರಹ

Spread the love

Earth--01

ವಾಷಿಂಗ್ಟನ್, ಏ.9-ಬೃಹತ್ ಕ್ಷುದ್ರಗ್ರಹವೊಂದು ಏ.19ರಂದು ಸುರಕ್ಷಿತವಾಗಿ ಭೂಮಿಯ ಸಮೀಪ ಹಾದುಹೋಗಲಿದೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.   ಈ ಕ್ಷುದ್ರಗ್ರಹವನ್ನು 2014ಜೆಒ25 ಎಂದು ಗುರುತಿಸಲಾಗಿದ್ದು, ಮೂರು ವರ್ಷಗಳ ಹಿಂದೆ ಇದು ಪತ್ತೆಯಾಗಿದೆ. ಸುಮಾರು 2,000 ಘನ ಅಡಿ ಗಾತ್ರ ಹೊಂದಿರುವ ಅದು, ಸುಮಾರು 18 ಲಕ್ಷ ಸುರಕ್ಷಿತ ಅಂತರದಲ್ಲಿ ಭೂಮಿಯನ್ನು ಹಾದು ಹೋಗಲಿದೆ ಎಂದು ಅಂದಾಜು ಮಾಡಲಾಗಿದೆ.
ಆಕಾಶಕಾಯವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲವಾದರೂ, ಈ ಬೃಹತ್ ಗಾತ್ರದ ಕ್ಷುದ್ರಗ್ರಹವು ಇಳೆಯ ಬಳಿ ಇಷ್ಟೊಂದು ಸಮೀಪದಲ್ಲಿ ಹಾದು ಹೋಗುತ್ತಿರುವುದು ಇದೇ ಮೊದಲು ಎಂದು ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದು, ಇದರ ಚಲನೆ ಮತ್ತು ವ್ಯೋಮ ವಿದ್ಯಮಾನಗಳ ಬಗ್ಗೆ ಅಧ್ಯಯನ ನಡೆಸಲು ನಾಸಾ ಸಜ್ಜಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin