ಐಎಎಸ್ ಅಧಿಕಾರಿ ತಿವಾರಿ ಸಾವಿನ ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ

Spread the love

Anurag-Tiwary

ನವದೆಹಲಿ, ಜೂ.19- ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣವನ್ನು ಸಿಬಿಐ ಕೊನೆಗೂ ಕೈಗೆತ್ತಿಕೊಂಡಿದ್ದು, ತನಿಖೆ ಆರಂಭಿಸಿದೆ. ತಿವಾರಿ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿಲ್ಲ, ಸಾಯುವುದಕ್ಕೂ ಮುನ್ನ ಹಲ್ಲೆಗೊಳಗಾಗಿದ್ರು ಎಂದು ವಿಧಿವಿಜ್ಞಾನ ಸಂಸ್ಥೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.  ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ನಡೆಸಿ, ಕೊಲೆ ಸಂಚು ನಡೆದಿಲ್ಲ ಎಂದು ವರದಿ ನೀಡಿದೆ.

ಯೋಗಿ ಆದಿತ್ಯನಾಥ್ ಸರ್ಕಾರದ ಮೇಲೆ ನಂಬಿಕೆ ಇಲ್ಲ, ನಮಗೆ ನ್ಯಾಯ ಒದಗಿಸಿಕೊಡಿ ಎಂದ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಅನುರಾಗ್ ತಿವಾರಿ ಅವರ ಸೋದರ ಮನೋಜ್ ಅವರು ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.  ಇದರ ಜತೆಗೆ ಸಿಬಿಐ ತನಿಖೆಗೆ ಉತ್ತರಪ್ರದೇಶ ಸರ್ಕಾರ ಶಿಫಾರಸು ಮಾಡಿತ್ತು. ಆದರೆ, ಒಂದು ತಿಂಗಳು ಕಳೆದರೂ ತನಿಖೆ ಇನ್ನೂ ಆರಂಭವಾಗಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಕೇಸ್ ಫೈಲ್ ಗಳನ್ನು ಎಸï ಐಟಿ ಅಧಿಕಾರಿಗಳಿಂದ ಪಡೆದುಕೊಂಡಿದ್ದ ಸಿಬಿಐ, ತನಿಖೆ ಆರಂಭಿಸಿದೆ.

ಉತ್ತರಪ್ರದೇಶದ ಪೊಲೀಸರಿಂದ ಎಫ್‍ಐಆರ್ , ಸಿಸಿಟಿವಿ ದೃಶ್ಯಾವಳಿ ಮತ್ತಿತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು. ತಿವಾರಿ ಅವರು ಸತ್ತು ಬಿದ್ದಿದ್ದ ಸ್ಥಳ ಮತ್ತು ಉಳಿದುಕೊಂಡಿದ್ದ ಅತಿಥಿ ಗೃಹಕ್ಕೆ ಅಧಿಕಾರಿಗಳು ಸೋಮವಾರ ಭೈೀಟಿ ನೀಡಿ ಪರಿಶೀಲಿಸಲಿದ್ದಾರೆ. ಜತೆಗೆ ಮರಣೋತ್ತರ ಪರೀಕ್ಷೆ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin