ಐಎಸ್ ಉಗ್ರರ ದಾಳಿಗೆ ಸಿರಿಯಾ ಜೆಟ್ ಪತನ ; ಇಬ್ಬರು ಪೈಲೆಟ್‍ಗಳು ಬಲಿ

Spread the love

Plane-Crash

ಅಂಕಾರ, ಮಾ.6-ಟರ್ಕಿ ಪ್ರದೇಶದಲ್ಲಿ ಪತನಗೊಂಡ ಸಿರಿಯಾ ಸರ್ಕಾರದ ಯುದ್ದ ವಿಮಾನವನ್ನು ತಾವೇ ಹೊಡೆದುರುಳಿಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳು ಘೋಷಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೈಲೆಟ್‍ಗಳು ಸಾವಿಗೀಡಾಗಿದ್ದಾರೆ. ವಿಮಾನ ಧ್ವಂಸ ಮಾಡಬಲ್ಲ ಫಿರಂಗಿ (ಆಂಟಿ-ಏರ್‍ಕ್ರಾಫ್ಟ್ ಗನ್) ಮೂಲಕ ಫೈಟರ್ ಜೆಟ್‍ನನ್ನು ಹೊಡೆದುರುಳಿಸಲಾಗಿದೆ ಎಂದು ತೋರಿಸುವ ವಿಡಿಯೋ ದೃಶ್ಯವನ್ನು ಐಎಸ್ ಜೊತೆ ಸಂಪರ್ಕ ಹೊಂದಿರುವ ಅಹ್‍ರ್ರಾರ್-ಎಲ್-ಶಮ್ ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿದೆ. ಆದರೆ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸಾದ್ ನೇತೃತ್ವದ ಸೇನಾಪಡೆ ಈ ಹೇಳಿಕೆಯನ್ನು ತಳ್ಳಿ ಹಾಕಿದೆ. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಹಟಾಯ್ ಪ್ರಾಂತ್ಯದ ಸಮನ್‍ದಗ್ ಪಟ್ಟಣದ ಬಳಿ ಅಮೋಸ್ ಪರ್ವತ ಶ್ರೇಣಿ ಬಳಿ ವಿಮಾನ ಪತನಗೊಂಡಿರುವುದನ್ನು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡಿರಿಮ್ ಖಚಿತಪಡಿಸಿದ್ಧಾರೆ.
ಯುನೆಸ್ಕೋ ವಿಶ್ವ ಪರಂಪರೆ ತಾಣ ಧ್ವಂಸ : ಐಎಸ್ ಉಗ್ರರ ದಾಳಿಯಲ್ಲಿ ಸಿರಿಯಾದ ಪ್ರಾಚೀನ ಪಟ್ಟಣ ಪಲ್ಮೀರಾದಲ್ಲಿನ ಯುನೆಸ್ಕೋ ವಿಶ್ವ ಪರಂಪರೆ ತಾಣ ಎಂಬ ಮಾನ್ಯತೆಗೆ ಪಾತ್ರವಾಗಿದ್ದ ಪ್ರಾಚೀನ ಸ್ಮಾರಕ ಸಹ ಧ್ವಂಸಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin