ಐಎಸ್ ಸಂಘಟನೆಯ ಪ್ರಬಲ ನಾಯಕ ಅಲ್ ಅದಾನಿ ಹತ್ಯೆ ಖಚಿತಪಡಿಸಿದ ಪೆಂಟಗನ್

Spread the love

Al-Adani

ವಾಷಿಂಗ್ಟನ್, ಸೆ.13-ಅತಿ ಕ್ರೂರ ಹಿಂಸಾಚಾರಗಳ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆ ಸಂಘಟನೆಯ ಪ್ರಬಲ ನಾಯಕ ಮತ್ತು ವಕ್ತಾರ ಅಬು ಮಹಮದ್ ಅಲ್ ಅದಾನಿ ಸಿರಿಯಾದಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಹತನಾಗಿರುವುದನ್ನು ರಕ್ಷಣಾ ಇಲಾಖೆ ಪೆಂಟಗನ್ ಖಚಿತಪಡಿಸಿದೆ.   ಉತ್ತರ ಸಿರಿಯಾದ ಅಲ್ ಬಬು ಬಳಿ ಕಳೆದ ತಿಂಗಳು ಅಮೆರಿಕ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಐಎಸ್‍ನ ಪ್ರಬಲ ನಾಯಕ ಮತ್ತು ಬಾಹ್ಯ ಭಯೋತ್ಪಾದನೆ ಕಾರ್ಯಾಚರಣೆಗಳ ರೂವಾರಿ ಅಲ್ ಅದಾನಿ ಮೃತಪಟ್ಟಿದ್ದಾನೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಪೀಟರ್ ಕುಕ್ ಹೇಳಿದ್ದಾರೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಮತ್ತು ಭಯಾನಕ ದಾಳಿಗೆ ಕಾರಣರಾದ ಇಸ್ಲಾಮಿಕ್ ಸ್ಟೇಟ್‍ನ ನಾಯಕರ ವಿರುದ್ಧ ನಡೆಯುತ್ತಿರುವ ಯಶಸ್ವಿ ಸರಣಿ ದಾಳಿಗಳಲ್ಲಿ ಇದು ಕೂಡ ಒಂದಾಗಿದ್ದು, ಉಗ್ರಗಾಮಿಗಳಿಗೆ ಇದ್ದು ದೊಡ್ಡ ಹೊಡೆತ ನೀಡಿದೆ ಎಂದು ಅವರು ಬಣ್ಣಿಸಿದ್ದಾರೆ.  ಅಲ್ ಬಬು ಬಳಿ ಆಗಸ್ಟ್ 30ರಂದು ವಾಯು ದಾಳಿ ನಡೆಸಲಾಯಿತು. ಅದಾನಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಪ್ರೀಡೆಟರ್ ಡ್ರೋಣ್ ಹಾರಿಸಿದ ಹೆಲ್‍ಫೈರ್ ಕ್ಷಿಪಣಿಯಿಂದಾಗಿ ಅತ ಹತನಾದ.

► Follow us on –  Facebook / Twitter  / Google+
.

Facebook Comments

Sri Raghav

Admin